Published On: Tue, Aug 20th, 2024

ಸಂಸ್ಕೃತೋತ್ಸವ ಮತ್ತು ರಕ್ಷಾಬಂಧನ ಕಾರ್ಯಕ್ರಮ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಸಂಸ್ಕೃತೋತ್ಸವ ಮತ್ತು ರಕ್ಷಾಬಂಧನ ಕಾರ್ಯಕ್ರಮ ಶಾಲಾ ಮಧುಕರ ಸಭಾಂಗಣದಲ್ಲಿ ನಡೆಯಿತು. ಸಂಸ್ಕೃತ ಭಾರತೀಯ ಕಾರ್ಯಕರ್ತರು, ಕಾಂಚನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಸೂರ್ಯ ಪ್ರಕಾಶ್  ಅವರು ಮಾತನಾಡಿ  ಪ್ರತಿಯೊಬ್ಬ ವಿದ್ಯಾರ್ಥಿಯು ಆಧುನಿಕ ಶಿಕ್ಷಣಕ್ಕೆ ಮಾರುಹೋಗದೆ ಸಂಸ್ಕೃತ ಭಾಷೆಯ ಧ್ವನಿಯ ಸೊಗಡನ್ನು ತಿಳಿಯಬೇಕು. ಹಾಗಾದಾಗ ಮಾತ್ರ ಸಂಸ್ಕೃತ ಭಾಷೆಯು ಉತ್ತುಂಗಕ್ಕೆ ಏರಲು ಸಾಧ್ಯ ಎಂದರು.

ಕೇಸರಿ ಎಂಬುದು ಜ್ಞಾನ ಮತ್ತು ಶೌರ್ಯದ ಸಂಕೇತ. ರಕ್ಷೆಯ ರೇಷ್ಮೆ ಎಳೆಗಳು ಬೇರೆ ಬೇರೆ ಇದ್ದಾಗ ದುರ್ಬಲವಾಗಿರುತ್ತದೆ. ಅದನ್ನು ಒಟ್ಟು ಸೇರಿಸಿ ದಾರದಲ್ಲಿ ಕಟ್ಟಿದಾಗ ಅದು ಪ್ರಬಲವಾಗಿರುತ್ತದೆ. ಅದೇ ರೀತಿ ನಾವೆಲ್ಲ ದೇಶ ಮತ್ತುಒಳ್ಳೆಯ ಧ್ಯೇಯಕ್ಕಾಗಿ  ಸಂಘಟನಾತ್ಮಕವಾಗಿರಬೇಕು ಎಂದು ಹೇಳಿದರು.  

ಪ್ರೌಢಶಾಲೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಶಾಲಾ ವಾಹನದ ಚಾಲಕರು ಮತ್ತು ನಿರ್ವಾಹಕರೊಂದಿಗೆ ರಕ್ಷಾಬಂದನ ಆಚರಿಸಲಾಯಿತು. ಈ ಸಂದರ್ಭದಲ್ಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ್ ಎಂ. ಉಪಸ್ಥಿತರಿದ್ದರು.

 ಸಂಸ್ಕೃತೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಂದ ನೃತ್ಯ ಮತ್ತು ಸಂಸ್ಕೃತ ಯಕ್ಷಗಾನ, ರೂಪಕದ ಪ್ರದರ್ಶನ ನಡೆಯಿತು. 

೨೦೨೩-೨೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಂಸ್ಕೃತದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರತಿಭಾಕಾರಂಜಿಯ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ಹಾಸನದಲ್ಲಿ ನಡೆದ ರಾಜ್ಯಮಟ್ಟದ ೧೪ರ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡ, ಥಣಿಸಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಪಡೆದ ಅನರ್ಘಳನ್ನು  ಅಭಿನಂದಿಸಲಾಯಿತು. ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟುವುದರ ಮೂಲಕ ರಕ್ಷಾಬಂಧನವನ್ನು ಆಚರಿಸಿದರು. ಪ್ರಾಣೇಶ್ ರಕ್ಷಾಬಂಧನದ ಸಂದೇಶವನ್ನು  ತಿಳಿಸಿದನು.  ಸಾನ್ವಿಕಾಮತ್ ಸ್ವಾಗತಿಸಿ, ಧನ್ಯ ವಂದಿಸಿದಳು. ತೃಪ್ತಿ ಕಾರ್ಯಕ್ರಮ ನಿರೂಪಿಸಿದಳು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter