ನಾಯಿಲ ಇದರ ಆಶ್ರಯದಲ್ಲಿ “ಕೇಸರದ ಕಂಡೊಡು ಗೊಬ್ಬುದ ಕೂಟ” ಕಾರ್ಯಕ್ರಮ
ಬಂಟ್ವಾಳ: ಓಂ ಶ್ರೀ ಗೆಳೆಯರ ಬಳಗ (ರಿ) ನಾಯಿಲ ಇದರ ಆಶ್ರಯದಲ್ಲಿ “ಕೇಸರದ ಕಂಡೊಡು ಗೊಬ್ಬುದ ಕೂಟ” ಕಾರ್ಯಕ್ರಮವು ನರಿಕೊಂಬು ಗ್ರಾಮದ ನಾಯಿಲ ಗದ್ದೆಯಲ್ಲಿ ನಡೆಯಿತು.ಉದ್ಯಮಿ ಉಮೇಶ್ ನೆಲ್ಲಿಗುಡ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾರುತಿ ನಗರದ ಪ್ರವೀಣ್ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಲೋಕಸಭಾ ಸದಸ್ಯರಾದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಸಚಿವ ಬಿ. ರಮನಾಥ ರೈ , ದಾಸ್ ಪ್ರಮೋಷನ್ ಆಡಳಿತ ನಿರ್ದೇಶಕರಾದ ಲ.ಅನಿಲ್ ದಾಸ್ , ಜಿ. ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಮಾಜಿ ತಾ.ಪಂ ಸದಸ್ಯರಾದ ಸಂಜೀವ ಪೂಜಾರಿ, ಪದ್ಮನಾಭ ರೈ , ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ , ಗ್ರಾ.ಪಂ ಸದಸ್ಯೆ ಉಷಾ ರಮಾನಂದ, ನ್ಯಾಯವಾದಿ ಕಾವ್ಯಶ್ರೀ ಉಮೇಶ್, ಹರೀಶ್ ಮೊಗ೯ನಾಡು,ದಿನೇಶ್ ಕುಲಾಲ , ಸಂಚಾಲಕ ಶುಭಕರ ನಾಯಿಲ ಮೊದಲಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸಿನಿಮಾ ಕಲಾವಿದರು ಮತ್ತು ಕಂಬಳದ ಕೋಣ ಆಕರ್ಷಣೆಯಾಗಿತ್ತು. ಸಂಘದ ಅಧ್ಯಕ್ಷ ಕಿರಣ್ ಅಟ್ಲೂರು ಸ್ವಾಗತಿಸಿದರು.