ವಾಮಂಜೂರೂ ಸಾರ್ವಜನಿಕ ಶ್ರೀ ಶಾರದಾ ಪೂಜಾ ಸಮಿತಿಯ ಆಮಂತ್ರಣ ಪತ್ರ ಬಿಡುಗಡೆ
ಕೈಕಂಬ: ವಾಮಂಜೂರು ಶ್ರೀ ರಾಮನಗರದ ಶ್ರೀ ರಕ್ತೇಶ್ವರಿ ಮತ್ತು ಪಂಚದೇವತಾ ಸಾನಿಧ್ಯದ ವಾಮಂಜೂರು ಸಾರ್ವಜನಿಕ ಶ್ರೀ ಶಾರದಾ ಪೂಜಾ ಸಮಿತಿ(ರಿ) ವತಿಯಿಂದ ಅಕ್ಟೋಬರ್ ೯ರಿಂದ ೧೩ರವರೆಗೆ ವಾಮಂಜೂರು ಕೇಂದ್ರ ಮೈದಾನದಲ್ಲಿ ನಡೆಯಲಿರುವ ಶ್ರೀ ಶಾರದಾ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪರಾರಿ ತೆಕ್ಕಿಬೆಟ್ಟಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆ. ೧೮ರಂದು ಬಿಡುಗಡೆಗೊಳಿಸಲಾಯಿತು.

ಆಮಂತ್ರಣ ಪತ್ರಿಕೆ ಬಿಡುಗಡೆಗೆ ಮುನ್ನ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಹಿರಿಯ ಅರ್ಚಕ ಸತ್ಯನಾರಾಯಣ ಹೊಳ್ಳ ಹಾಗೂ ಪ್ರಧಾನ ಅರ್ಚಕ ರಾಜೇಶ್ ಭಟ್ ಅವರು ಶ್ರೀ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ, ಮಂಗಳೂರು ನಗರ ಉತ್ತರ ಬಿಜೆಪಿ ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಮಾತನಾಡಿ, ಹಿಂದೂ ಸಮಾಜ ಒಗ್ಗಟ್ಟಿನಲ್ಲಿರಬೇಕಿದ್ದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಹಿಂದೂಗಳೆಲ್ಲರೂ ಮಹತ್ವ ನೀಡಬೇಕು. ವಾಮಂಜೂರು ಶಾರದಾ ಮಹೋತ್ಸವ ಇತಿಹಾಸ ಪುಟದಲ್ಲಿ ಬರೆದಿಡುವಂತೆ ಉತ್ತಮ ರೀತಿಯಲ್ಲಿ ಸಂಘಟಿಸಬೇಕು. ಇದಕ್ಕೆ ಎಲ್ಲರ ಸಹಕಾರ ಅವಶ್ಯ ಎಂದರು.
ಸಮಿತಿಯ ಗೌರವಾಧ್ಯಕ್ಷ ಉದ್ಯಮಿ ಮೋಹನದಾಸ ಬಂಗೇರ, ಸಮಿತಿಯ ಉಪಾಧ್ಯಕ್ಷರಾದ ಮೋಹನ್ ಪಚ್ಚನಾಡಿ, ಹಿರಿಯ ಅರ್ಚಕ ಸತ್ಯನಾರಾಯಣ ಹೊಳ್ಳ, ಬಿಪಿನ್ ಜೋಗಿ ವಾಮಂಜೂರು, ರಾಜೀವ ಅಂಚನ್ ಅಪ್ಪನಬೆಟ್ಟುಗುತ್ತು, ಉದ್ಯಮಿ ಧನಂಜಯ ಸುವರ್ಣ ಕೆಲರೈಕೋಡಿ, ರಾಜೇಶ್ ಸುವರ್ಣ ಗುರುಪುರ ಹಾಗೂ ಪ್ರಧಾನ ಅರ್ಚಕ ರಾಜೇಶ್ ಭಟ್, ಚಂದ್ರಶೇಖರ ರಾಮನಗರ, ಬರ್ಕೆ ಮನೆತನದ ಸದಾನಂದ ಪೂಜಾರಿ, ಸಂಘ-ಸAಸ್ಥೆಗಳ ಪ್ರತಿನಿಧಿಗಳು ಹಾಗೂ ಸ್ಥಳೀಯರು ಇದ್ದರು. ಸಮಿತಿಯ ಉಪಾಧ್ಯಕ್ಷ ಉಮೇಶ್ ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು.