ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಪುನರಾರಂಭ
ಮಂಗಳೂರು: ಸಕಲೇಶಪುರ ಮತ್ತು ಬಾಳ್ಳುಪೇಟೆ ಮಾರ್ಗದ ನಡುವೆ ಗುಡ್ಡ ಕುಸಿತದಿಂದ ರದ್ದಾಗಿದ್ದ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಸೋಮವಾರದಿಂದ ಪುನರಾರಂಭಗೊಂಡಿದೆ. ಹಳಿಗಳ ಮಣ್ಣು ತೆರವುಗೊಳಿಸುವ ಕಾರ್ಯ ಸೋಮವಾರ ಪೂರ್ಣಗೊಂಡಿದ್ದು, ಹಳಿಗಳ ಮರುಜೋಡಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಗಸ್ಟ್ 17 ರಂದು ರದ್ದುಗೊಂಡ ಎಲ್ಲಾ ರೈಲು ಸೇವೆಗಳು ಈಗ ಪುನರಾರಂಭಗೊಂಡಿವೆ. ಆಗಸ್ಟ್ 16 ರಂದು ಬೆಟ್ಟದಿಂದ ಮಣ್ಣು ಹಳಿಗಳ ಮೇಲೆ ಬಿದ್ದು ಸಂಪೂರ್ಣ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದೀಗ ರೈಲ್ವೆ ಸಿಬ್ಬಂದಿಗಳ ಶ್ರಮದಿಂದ ಇದೀಗ ಮತ್ತೆ ರೈಲು ಸಂಚಾರಕ್ಕೆ ಸುಗಮವಾಗಲಿದೆ ಎಂದು ಹೇಳಿದ್ದಾರೆ.