ಮಂಗಳೂರು: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕೆಳಗೆ ಬಿದ್ದ ಪ್ರಯಾಣಿಕ, ಸಿಬ್ಬಂದಿ ಸಮಯಪ್ರಜ್ಞೆಯಿಂದ ಉಳಿಯಿತು ಜೀವ, ಇಲ್ಲಿದೆ ವಿಡಿಯೋ

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಆಯತಪ್ಪಿ ಬೀಳುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿರುವ ಘಟನೆ ಮಂಗಳೂರಿನರಿನ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲ್ವೆ ಭದ್ರತಾ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಪ್ರಯಾಣಿಕನು ಬದುಕುಳಿದಿದ್ದಾನೆ.
ಮಂಗಳೂರಿಂದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲು ಚಲಿಸುತ್ತಿದ್ದ ವೇಳೆ ಆ ರೈಲು ಹತ್ತಲು ಪ್ರಯಾಣಿಕ ಸಸಾಂಗ್ ಯತ್ನಿಸಿದ್ದಾನೆ. ಈ ವೇಳೆ ರೈಲು ಹತ್ತುತ್ತಿದ್ದಂತೆ ಆಯತಪ್ಪಿ ಕೆಳಗೆ ಬಿದ್ದಿದ್ದು, ರೈಲು ಮತ್ತು ಪ್ಲಾಟ್ಫಾರ್ಮ್ ಮಧ್ಯೆ ಸಿಲುಕಿಕೊಂಡಿದ್ದಾರೆ.
ಆ ತಕ್ಷಣವೇ ಸಸಾಂಗ್ನನ್ನು ಆರ್ಪಿಎಫ್ ಹೆಡ್ಕಾನ್ಸ್ಟೇಬಲ್ ರಾಘವನ್ ಕೈ ಹಿಡಿದು ಎಳೆದು ಪ್ರಾಣ ರಕ್ಷಿಸಿದ್ದಾರೆ. ಪ್ರಯಾಣಿಕ ಸಸಾಂಗ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದು, ಈ ಘಟನೆಯ ಸಿ.ಸಿ.ಟಿ.ವಿ ಕ್ಯಾಮರಾದಲ್ಲಿ ಸೆರೆ ಆಗಿದೆ.