ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ,ಸಂವಿಧಾನಿಕ ನಿಯಮ ಗೌರವಿಸಿ ನೈತಿಕತೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಭು ಆಗ್ರಹ
ಬಂಟ್ವಾಳ: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ಹಂಚಿಕೆ ಮಾಡಲಾದ ನಿವೇಶನಗಳ ಆಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇರ ಪಾತ್ರವಿರುವ ಹಿನ್ನಲೆಯಲ್ಲಿಯೇ ರಾಜ್ಯಪಾಲರು ಪ್ರಾಸಿಕ್ತೂಷನ್ ಗೆ ಅನುಮತಿ ನೀಡಿದ್ದು, ರಾಜ್ಯದ ಸಾರ್ವತ್ರಿಕ ಹಿತದೃಷ್ಠಿಯಿಂದ ಇದು ಸ್ವಾಗತಾರ್ಹವಾಗಿದೆ, ಕಾಂಗ್ರೆಸ್ ಪಕ್ಷವು ಇದನ್ನು ಖಂಡಿಸಿ ಹೇಳಿಕೆ ಮತ್ತು ಪ್ರತಿಭಟನೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಬಂಟ್ವಾಳ ಮಂಡಲದ ಕಾರ್ಯದರ್ಶಿ ಪ್ರಭಾಕರ ಪ್ರಭು ಟೀಕಿಸಿದ್ದಾರೆ.

ಮೂವರು ಸಾಮಾಜಿಕ ಕಾರ್ಯಕರ್ತರು ನೀಡಿರುವ ಪ್ರತ್ಯೇಕ ದೂರಗಳ ಹಿನ್ನಲೆಯಲ್ಲಿ ಹಾಗೂ ದೂರುದಾರರು ಸಲ್ಲಿಸಿದ ದಾಖಲೆಗಳಿಂದ ಮೇಲ್ನೋಟಕ್ಕೆ ಮುಖ್ಯಮುಂತ್ರಿಯವರು ಭಾಗಿಯಾಗಿರಿವುದು ಕಂಡು ಬಂದಿರುವುದರಿಂದ ರಾಜ್ಯಪಾಲರು ತನ್ನ ಕಾನೂನು ತಜ್ಞರೊಂದಿಗೆ ಚರ್ಚಿಸಿದ ಅವರ ಅಭಿಪ್ರಾಯವನ್ನು ಕ್ರೋಢಿಕರಿಸಿಕೊಂಡ ಬಳಿಕವೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬಹುದಾದ ಕೆಲವೊಂದು ಬಲವಾದ ಕಾರಣಗಳನ್ನು ಗಣನೆಗೆ ತೆಗೆದುಕೊಂಡು ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದು ಪ್ರಭು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಸಾರ್ವತ್ರಿಕ ಹಿತದೃಷ್ಠಿಯಿಂದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಸ್ವಾಗಾತಾರ್ಹ ವಾಗಿದ್ದು, ಕಾಂಗ್ರೆಸ್ ಪಕ್ಷವು ಇದನ್ನು ಖಂಡಿಸಿ ಹೇಳಿಕೆ ಮತ್ತು ಪ್ರತಿಭಟನೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣವೇ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಆಮೂಲಕ ಮಾಜಿ ಮುಖ್ಯ ಮಂತ್ರಿ ಬಿ.ಎಸ್ ಯೂಡಿಯೂರಪ್ಪನವರು ಅನುಸರಿಸಿದ ಹಾದಿಯನ್ನು ಅನುಸರಿಸಿ, ಅವರಿಗೆ ಮಾದರಿಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ದೂರುದಾರರಲ್ಲೊಬ್ಬರಾದ ಅಬ್ರಹಾಂ ರನ್ನು ಒಂದು ಕಾಲದಲ್ಲಿ ಇದೇ ಸಿದ್ದರಾಮಯ್ಯನವರು ಇಂತಹ ಸಾಮಾಜಿಕ ಕಾರ್ಯಕರ್ತರು ಸಮಾಜಕ್ಕೆ ಅವಶ್ಯಕ ಎಂದಿದ್ದರು,ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ರವರು ಹಿಂದೆ ಮುಖ್ಯ ಮಂತ್ರಿಯಾಗಿದ್ದ ಬಿ.ಎಸ್ ಯೂಡಿಯೂರಪ್ಪ ಅವರ ವಿರುದ್ದ ಇದೇ ಮಾದರಿಯಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಾಗ ರಾಜ್ಯಪಾಲರ ಕ್ರಮ ಸಾಂವಿಧಾನಿಕ ಕ್ರಮ ಎಂದು ಸ್ವಾಗತಿಸಿ ಹೇಳಿಕೆ ನೀಡಿರುವ ಸಿದ್ದರಾಮಯ್ಯನವರು ತನ್ನ ಮೇಲೆ ಪ್ರಾಸಿಕ್ಯೂಷನ್ ಗೆ
ಅನುಮತಿ ನೀಡಿದಾಗ ಮಾತ್ರ ಈಗಿನ ರಾಜ್ಯಪಾಲರು ಸರಿಯಿಲ್ಲ ,ಕೇಂದ್ರ ಸರಕಾರದ ಕೈಗೊಂಬೆ ಎಂದು ಹೇಳುತ್ತಿರುವುದು ಮುಖ್ಯಮಂತ್ರಿ ಸ್ಥಾನಕ್ಕೆ ಔಚಿತ್ಯವಲ್ಲ ಎಂದು ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತನಗೆ ಬೇಕಾದಂತೆ ಸಂದರ್ಭೋಚಿತವಾಗಿ ಅಲ್ಲಲ್ಲಿ ಮಾತಾನಾಡುತ್ತಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಜನರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರಭಾಕರ ಪ್ರಭು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.