ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಬಿ.ಸಿ.ರೋಡಿನಲ್ಲಿ ಕಾಂಗ್ರೆಸ್ ಪ್ರತಿಭಟನೆ
ಬಂಟ್ವಾಳ: ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಸಂಜೆ ಬಿ.ಸಿ.ರೋಡಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಮಾಜಿ ಸಚಿವ ರಮಾನಾಥ ರೈ ಅವರು ಪ್ರತಿಭಟನಾಕಾರರನ್ನುದ್ದೇಶಿಸಿಸಿ ಮಾತನಾಡಿ, ಜನಪರವಾದ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಅಧಾರವಿಲ್ಲದ ಆರೋಪವನ್ನು ಮಾಡಿ ಕುಟಿಲನೀತಿಯ ಮೂಲಕ ಸರಕಾರವನ್ನು ಅಸ್ಥಿರಗೊಳಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಟೀಕಿಸಿದರು.
ಸಿದ್ದಾರಾಮಯ್ಯ ಅವರು ಬಿಜೆಪಿಯನ್ನು ನೇರ ಟಾರ್ಗೆಟ್ ಮಾಡುತ್ತಿದ್ದು,ಅವರನ್ನುಎದುರಿಸಲಾಗದೆ ಖಾಸಗಿ ವ್ಯಕ್ತಿಯಿಂದ ಅರ್ಜಿಯನ್ನು ಕೊಡಿಸಿ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಗೆ ಅನುಮತಿಕೊಡಿಸಲಾಗಿದೆ.ಇದರ ವಿರುದ್ಧ ಕಾನೂನು ಹೋರಾಟ ನಡೆಸುವ ಜೊತೆಗೆ ಇಡೀ ಕಾಂಗ್ರೆಸ್ ಪಕ್ಷ ಸಿಎಂ ಸಿದ್ದಾರಾಮಯ್ಯ ಅವರ ಬೆನ್ನಿಗೆ ನಿಲ್ಲಲಿದೆ ಎಂದರು.
ಕೆಪಿಸಿಸಿ ಪ್ರ.ಕಾರ್ಯದರ್ಶಿಪದ್ಮರಾಜ್ ಆರ್ ಪೂಜಾರಿ ಸಿ.ಎಂ.ಸಿದ್ದರಾಮಯ್ಯ ಅವರು ರಾಜ್ಯ ಮೆಚ್ಚಿದ ಸಚ್ಚಾರಿತ್ಯದ ರಾಜಕಾರಿಣಿಯಾಗಿದ್ದು ,ಕುತಂತ್ರ ರಾಜಕಾರಣದ ಮೂಲಕ ಸಂವಿಧಾನಕ್ಕನುಗುಣ ಆರಿಸಿ ಬಂದ ಸರಕಾರವನ್ನು ಬಿಜೆಪಿ ಬುಡಮೇಲು ಮಾಡಲು ಸಂಚು ನಡೆಸುತ್ತಿದೆ ಎಂದು ಟೀಕಿಸಿದರು. ಮೂಡಾ ಹಗರಣವೇ ಅಲ್ಲ ಸಿದ್ದರಾಮಯ್ಯ ಅವರು ಇದರಲ್ಲಿ ಯಾವುದೇ ಅಪರಾಧ ಮಾಡಿಲ್ಲ,ರಾಜ್ಯಪಾಲರ ತಮ್ಮ ಹುದ್ದೆಗೆ ಅಗೌರವ ತರುವ ರೀತಿಯಲ್ಲಿ ಕೆಲಸಮಾಡಿದ್ದು ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದರು.
ಕೆಪಿಸಿಸಿ ಪ್ರ.ರ್ಕಾದರ್ಶಿಜಿ.ಎ.ಭಾವ ಮಾತನಾಡಿದರು.ಪಕ್ಷದ ಮುಖಂಡರಾದಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರ ಜೈನ್,ಅಶ್ವನಿಕುಮಾರ್ ರೈ,ಬಾಲಕೃಷ್ಣ ಅಂಚನ್,ಪಿಯೂಸ್ ರೋಡ್ರಿಗಸ್,ಪದ್ಮನಾಭ ರೈ,ಅಬ್ಬಾಸ್ ಆಲಿ,ಜಯಂತಿ ಪೂಜಾರಿ,ಲವೀನಾ ಡಿಸೋಜ,ಡಾ.ರಘ,ಮಾಯಿಲಪ್ಪ ಸಾಲಿಯಾನ್,ಸದಾಶಿವ ಬಂಗೇರ,ನಾರಾಯಣ ನಾಯ್ಕ್ ,ಚಿತ್ತರಂಜನ್ ಶೆಟ್ಟಿ ಬೊಂಡಾಲ,ಮಧುಸೂದನ್ ಶೆಣ್ಯೆ,ಜೋಸ್ಪಿನ್ ಡಿಸೋಜ,ಸುದರ್ಶನ್ ಜೈನ್ ಮೊದಲಾದವರಿದ್ದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಸ್ವಾಗತಿಸಿದರು.
ಬೂಡಾ ಅಧ್ಯಕ್ಷ ಬೇಬಿಕುಂದರ್ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಟನೆಗೆ ಮುನ್ನ ಬಿ.ಸಿ.ರೋಡು ಕೈಕಂಬದಿಂದ ತಾಲೂಕಾಡಳಿತ ಸೌಧದವರೆಗೆ ಮಾಜಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.ಮೇಲ್ಸ್ ತುವೆಯ ತಳಭಾಗದಲ್ಲಿ ರಾಜ್ಯಪಾಲರ ಪ್ರತಿಕೃತಿದಹನ ಮಾಡಲಾಯಿತು.