ರಾಜೀವ್ ಯುವಜನ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಬಾಯಿಲ ಆಯ್ಕೆ
ಬಂಟ್ವಾಳ: ತಾಲೂಕಿನ ವೀರಕಂಭ ಗ್ರಾಮದ ರಾಜೀವ್ ಯುವಜನ ಸೇವಾ ಟ್ರಸ್ಟ್ (ರಿ )ಬಾಯಿಲ ಇದರ ಮಹಾಸಭೆಯು ಸುಧಾಕರ ಶೆಟ್ಟಿ ಶಂಭುಗ ಅವರ ಅಧ್ಯಕ್ಸತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಎ. ನೋಣಯ ಪೂಜಾರಿ, ಅಧ್ಯಕ್ಷರಾಗಿ ಸತೀಶ್ ಪೂಜಾರಿ ಬಾಯಿಲ ಅವರು ಆಯ್ಕೆಯಾಗಿದ್ದಾರೆ,
ಉಳಿದಂತೆ ಉಪಾಧ್ಯಕ್ಸರಾಗಿ ಯೋಗೀಶ್ ನಾಯ್ಕ ಕಾಜರ್ಲೆಕೋಡಿ, ಕಾರ್ಯದರ್ಶಿ ಪ್ರಸಾದ್ ಬಾಯಿಲ, ಜೊತೆ ಕಾರ್ಯದರ್ಶಿ ಜಯಂತ ಬಾಯಿಲ, ಕೋಶಾಧಿಕಾರಿ ಹರೀಶ್ ಗೊಳಿಮಾರ್, ಸಾಂಸ್ಕೃತಿಕ ಕಾರ್ಯಧರ್ಶಿ ಸುಧಾಕರ ಶೆಟ್ಟಿ ಶಂಭುಗ, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕೇಪುಲ ಕೋಡಿ ಆಯ್ಕೆಯಾದರು.
ಈ ಸಭೆಯಲ್ಲಿ ಟ್ರಸ್ಟಿಗಳಾದ ಜನಾರ್ಧನ ಪೂಜಾರಿ ಗೊಳಿಮಾರ್, ಉಮೇಶ್ ಕುಂದರ್, ಲೋಕಯ ಗೇನಿದಪಾಲು, ಶೇಖರ ಪೂಜಾರಿ, ಕೇಶವ ಬಾಯಿಲ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.