ಕಲ್ಲಡ್ಕ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಓಣಂ ಆಚರಣೆ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಪ್ರದೀಪ್ತ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಓಣಂ ಆಚರಣೆಯು ಕಾಲೇಜಿನ ಆಜಾದ್ ಭವನದಲ್ಲಿ ನಡೆಯಿತು.
ಸಾಂಸ್ಕೃತಿಕ ಸಾಮರಸ್ಯ ಸಾರುವ ಈ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳು ವಿಶೇಷ ಉಡುಪುಗಳನ್ನು (ಸೀರೆ) ಧರಿಸಿ ಪೂಕಳಂ ರಚಿಸಿದರು.
ವಿದ್ಯಾರ್ಥಿಗಳಿಗಾಗಿ ಪೂಕಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳ ತಂಡದಿಂದ ಚೆಂಡೆ ಹಾಗೂ ವಿದ್ಯಾರ್ಥಿನಿಯರ ತಂಡಗಳಿಂದ ತಿರುವಾದಿರ ಕಳಿ ಪ್ರದರ್ಶನಗಳು ನಡೆದವು. ವಿದ್ಯಾರ್ಥಿನಿ ಕು. ಪುನೀತಾ ಸ್ವಾಗತಿಸಿ, ಕು. ಧನ್ಯಶ್ರೀ ವಂದಿಸಿದರು.ಕು. ಸ್ವಾತಿಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.