13ನೇ ವಾಡರ್ಿನಲ್ಲಿ ‘ಶೂನ್ಯ ತ್ಯಾಜ್ಯ’ಕ್ಕೆ ಚಾಲನೆ
ಬಂಟ್ವಾಳ:ಇಲ್ಲಿನ ಪುರಸಭಾ ವ್ಯಾಪ್ತಿಯ ಎಲ್ಲಾ ಪ್ರದೇಶಗಳನ್ನು ಸ್ವಚ್ಛತೆಯ ಕಡೆಗೆ ಕೊಂಡೊಯ್ಯಲು ಪ್ರಾಯೋಗಿಕವಾಗಿ 13ನೇ ವಾಡರ್ಿನಲ್ಲಿ ‘ಮಾದರಿ ವಾಡ್ರ್ ಮತ್ತು ಶೂನ್ಯ ತ್ಯಾಜ್ಯ ವಸತಿ ಸಂಕೀರ್ಣ’ ಯೋಜನೆಗೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಸೋಮವಾರ ಚಾಲನೆ ನೀಡಿದರು.

ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿಗೊಳಿಸಲು ನಾಗರಿಕರು ಪವರ ಕಾಮರ್ಿಕರೊಂದಿಗೆ ಕೈ ಜೋಡಿಸಬೇಕು. ಹಸಿ ಮತ್ತು ಒಣ ಕಸ ಬೇರ್ಪಡಿಸಿ ನೀಡುವುದರ ಜೊತೆಗೆ ಎಲ್ಲೆಂದರಲ್ಲಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕಬೇಕು. ಆ ಮೂಲಕ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿಗೊಳಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಆರೋಗ್ಯಾಧಿಕಾರಿ ರತ್ನಪ್ರಸಾದ್, ಸಮುದಾಯ ಸಂಘಟಕಿ ಉಮಾವತಿ, ಸಮಿತಿ ಅಧ್ಯಕ್ಷೆ ಅಮೃತಾ ಭಟ್, ರಾಯಭಾರಿ ಸಂದೀಪ್ ಸಾಲ್ಯಾನ್, ಜಗನ್ನಾಥ ರೈ ಮೇರಾವು ಮತ್ತಿತರರು ಇದ್ದರು.