ಪಲ್ಲಿಪಾಡಿ ವಜ್ರಕಾಯ ಶಾಖೆ ಇದರ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ
ಪೊಳಲಿ: ವಿಶ್ವಹಿಂದೂಪರಿಷತ್ ಬಜರಂಗದಳ ವಜ್ರಕಾಯ ಶಾಖೆ ಪಲ್ಲಿಪಾಡಿ ಕರಿಯಂಗಳ ವಲಯ ಕಂಡದಬೆಟ್ಟು ಗುಂಡಿಕುಮೆರ್ ವತಿಯಿಂದ ಸ್ವಾತಂತ್ರೋತ್ಸವದ ಅಂಗವಾಗಿ ಊರಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜಗದೀಶ್ ಮತ್ತು ದೀಪ್ತಿ ಪಲ್ಲಿಪಾಡಿ ದಂಪತಿಗಳ ಪುತ್ರಿಯಾದ ಕುಮಾರಿ ಅಂಕಿತ, ಹರೀಶ್ ಮತ್ತು ಶಶಿಕಲಾ ಕರಿಯಂಗಳ ದಂಪತಿಗಳ ಪುತ್ರಿಯಾದ ಕುಮಾರಿ ಅಪೇಕ್ಷ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವಹಿಂದೂಪರಿಷತ್ ಬಜರಂಗದಳ ವಜ್ರಕಾಯ ಶಾಖೆಯ ಸದಸ್ಯರು ಉಪಸ್ಥಿತರಿದ್ದರು.
