ಪೊಳಲಿ: ಶಂಕರಪುರ ಮಠದ ಸಾಯಿ ಈಶ್ವರ್ ಗುರೂಜಿ ಭೇಟಿ 108 ದಿನ 108 ಕ್ಷೇತ್ರ ಪ್ರದಕ್ಷಿಣೆ
ಬಂಟ್ವಾಳ:ಉಡುಪಿ ಜಿಲ್ಲೆಯ ಶಂಕರಪುರ ದ್ವಾರಕಾಮಯಿ ಮಠದ ಸಾಯಿ ಈಶ್ವರ್ ಗುರೂಜಿ ಅವರು ‘108 ದಿನ 108 ಕ್ಷೇತ್ರ ಪ್ರದಕ್ಷಿಣೆ’ ಕಾರ್ಯಕ್ರಮ ಪ್ರಯುಕ್ತ ಸೋಮವಾರ ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವಳಕ್ಕೆ ಔಷಧೀಯ ಗಿಡ ವಿತರಿಸಿದರು.

ದೇಶದಲ್ಲಿ ‘ಮತಾಂತರಕ್ಕೆ ತಡೆ ಮತ್ತು ಸೈನಿಕರಿಗೆ ಶಕ್ತಿ’ ನೀಡುವುದಕ್ಕಾಗಿ ಶಂಕರಪುರ ದ್ವಾರಕಾಮಯಿ ಮಠವು ‘108 ದಿನ 108 ಕ್ಷೇತ್ರ ಪ್ರದಕ್ಷಿಣೆ’ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಜು.19ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಈಗಾಗಲೇ 38 ಕ್ಷೇತ್ರಗಳ ಪ್ರದಕ್ಷಿಣೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.
ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಪ್ರಮುಖರಾದ ಯಶವಂತ ಪೊಳಲಿ, ವೀಣಾ ಶೆಟ್ಟಿ, ಸತೀಶ್, ನಾಗೇಶ ಆದ್ಯಪಾಡಿ, ಭಾಸ್ಕರ ಎಸ್. ಎಡಪದವು ಮತ್ತಿತರರು ಇದ್ದರು