ಸಣ್ಣ ಮತ್ತು ದೊಡ್ಡ ಗೂಡ್ಸ್ ಟೆಂಪೋ,ಪಿಕಪ್ ಚಾಲಕ, ಮಾಲಕರ ಸಂಘದ ವಾರ್ಷಿಕ ಮಹಾಸಭೆ
ಬಂಟ್ವಾಳ: ಸಣ್ಣ ಮತ್ತು ದೊಡ್ಡ ಗೂಡ್ಸ್ ಟೆಂಪೋ ಪಿಕಪ್ ಚಾಲಕ, ಮಾಲಕರ ಸಂಘ ಬಿ.ಸಿ.ರೋಡ್ ಇದರ ವಾರ್ಷಿಕ ಮಹಾ ಸಭೆಯು ಬಿ.ಸಿ.ರೋಡಿನ ರಿಕ್ಷಾ ಭವನದಲ್ಲಿ ನಡೆಯಿತು.

ಸಭಾಧ್ಯಕ್ಷತೆ ವಹಿಸಿದ್ದ ಬಿ.ಸಿ.ರೋಡಿನ ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ಅವರು ಸದಸ್ಯರಿಗೆ ಕಾನೂನಿನ ಬಗ್ಗೆ ಮಹಿತಿ ನೀಡಿದರು.
ಸಭೆಯ ಮುಖ್ಯ ಅತಿಥಿಯಾಗಿದ್ದ ಕೃಷ್ಣಪ್ಪ ಪೂಜಾರಿ ಅಲ್ಲಿಪಾದೆ, ಪುರಸಭೆ ಮಾಜಿ ಸದಸ್ಯ ಲೋಕೇಶ್ ಸುವರ್ಣ ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತಾಡಿದರು. ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನಾರಾಯಣ ಕೆ, ಕಾರ್ಯದರ್ಶಿ ಹರೀಶ್ ಖಜಾಂಜಿ ಅತಿಫ್, ವಿಠ್ಠಲ್ ರವರು ಉಪಸ್ಥಿತರಿದ್ದರು.
ಇದೇವೇಳೆ ಸದಸ್ಯರು ತಮ್ಮ ಸಮಸ್ಯೆಯನ್ನು ಸಭೆಯ ಮುಂದಿಟ್ಟರು. ನಾರಾಯಣ ರವರು ಸ್ವಾಗತಿಸಿ, ವಂದಿಸಿದರು.