ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ” ಆಟಿಡೊಂಜಿ ಕೂಟ” ಕಾರ್ಯಕ್ರಮ
ಬಂಟ್ವಾಳ:ಸಿದ್ದಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಇಂಟರಾಕ್ಟ್ ಕ್ಲಬ್ ಹಾಗೂ ಪರಿಸರ ಸಂಘದ ಜಂಟಿ ಆಶ್ರಯದೊಂದಿಗೆ” ಆಟಿಡೊಂಜಿ ಕೂಟ” ಕಾರ್ಯಕ್ರಮ ನಡೆಯಿತು.
ಬಂಟ್ವಾಳ ರೋಟರಿಕ್ಲಬ್ ಅಧ್ಯಕ್ಷರಾದ ರೋ.ಬೇಬಿ ಕುಂದರ್ಕಾರ್ಯಕ್ರಮವನ್ನು ಕಲ್ಪವೃಕ್ಷದ ಕೊಂಬು ಅರಳಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಇಂದಿನ ಯುವಪೀಳಿಗೆ ಬದುಕಿಗೊಂದು ಗುರಿಯನ್ನು ಇಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು, ಬಲಿಷ್ಠ ಭಾರತ ನಿರ್ಮಾಣದ ಸದೃಢ ಹೆಜ್ಜೆಗಳು ಯುವಶಕ್ತಿಯದ್ದಾಗಬೇಕೆಂದು ಕರೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಧವ ಪರವರವರು ತುಳುನಾಡಿನ ಆಚರಣೆಗಳು ಮತ್ತು ದೈವಾರಾಧನೆಯ ಪರಂಪರೆ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಉಮೇಶ್ ಗೌಡ ಅವರು ಆಟಿ ತಿಂಗಳಿನ ಔಷಧೀಯ ಗುಣಗಳನ್ನುಳ್ಳ ಆಹಾರಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಶಾಲಾ ಉಪಪ್ರಾಂಶುಪಾಲರಾದ ಲೋನಾ ಲೋಬೋ, ಶಾಲಾ ಇಂಟರಾಕ್ಟ್ ಕ್ಲಬ್ ನ ಮಾರ್ಗದರ್ಶಕ ಶಿಕ್ಷಕರಾದ ಮಹೇಶ್ ಕರ್ಕೇರ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಇಂಟರಾಕ್ಟ್ ಕ್ಲಬ್ ವತಿಯಿಂದ ಡಿ ಐ ಆರ್ ಲಿಖಿತಾ ರವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ತುಳುನಾಡಿನ ಸಂಸ್ಕೃತಿ ಮತ್ತು ಬದುಕಿಗೆ ಕುರಿತಾದ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಇಂಟರಾಕ್ಟ್ ಕ್ಲಬ್ ನ ಸದಸ್ಯೆ ವರ್ಷಿಣಿ ಸ್ವಾಗತಿಸಿದರು ಕಾರ್ಯದರ್ಶಿ ರಶ್ಮಿತಾ ಹಾಗೂ ಉಪಾಧ್ಯಕ್ಷ ನೀರಜ್ ರವರು ಕಾರ್ಯಕ್ರಮ ನಿರೂಪಿಸಿದರು. ಡಿಐಆರ್ ಲಿಖಿತಾ ರವರು ವಂದಿಸಿದರು. ತುಳುನಾಡಿನ ತಿಂಡಿ ತಿನಸುಗಳು ಹಾಗೂ ಪ್ರಾಚ್ಯ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.