ಮಂಗಳೂರು: ಸ್ವಾತಂತ್ರ್ಯದಿಂದ ಭಾರತ ಎಂಬ ಶಬ್ದಕ್ಕೆ ವ್ಯಕ್ತಿತ್ವ ಬಂದಿದೆ: ಡಾ.ಡಿ.ವಿರೇಂದ್ರ ಹೆಗ್ಗಡೆ
![](https://www.suddi9.com/wp-content/uploads/2024/08/IMG-20240815-WA0010-650x366.jpg)
ದಕ್ಷಿಣ ಕನ್ನಡದಲ್ಲಿ ಇಂದು 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗಿದೆ. ಧರ್ಮಸ್ಥಳದಲ್ಲೂ ಕೂಡ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರಿಂದ ಸ್ವಾತಂತ್ರ್ಯ ದಿನಾಚರಣೆ ಸಂದೇಶವನ್ನು ನೀಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷ ಕಳೆದಿದೆ. ನನ್ನ ವಯಸ್ಸಿನಷ್ಟೇ ಸ್ವಾತಂತ್ರ್ಯೋತ್ಸವದ ಅನುಭವ ಪಡೀತಾ ಇದ್ದೇವೆ ಎಂದು ಹೇಳಿದರು.
ಸ್ವಾತಂತ್ರ್ಯ ಅಂದರೆ ನಮ್ಮ ದೇಶದ ಬೆಳವಣಿಗೆ, ಪ್ರಗತಿ, ಸಾಧನೆ ಜತೆಗೆ ನಮ್ಮ ದೇಶದಲ್ಲಿ ಒಲಿಂಪಿಕ್ಸ್ನಲ್ಲಿಯು ಸಾಧನೆ ಮಾಡಿದ್ದಾರೆ. ಕೃಷಿ, ವಿಜ್ಞಾನ ಕ್ಷೇತ್ರದಲ್ಲೂ ಹಾಗೂ ಚಂದ್ರ ಲೋಕಕ್ಕೆ ಹೋಗುವಲ್ಲಿ ಸಾಧನೆ ಮಾಡಿದ್ದಾರೆ. ಎಲ್ಲಾ ಸಾಧನೆ ಸಾಧ್ಯವಾಗಿದ್ದು ಸ್ವಾತಂತ್ರ್ಯ ಸಿಕ್ಕಿದರಿಂದ ಎಂದು ಹೇಳಿದರು.
ಒಂದು ವೇಳೆ ನಾವು ಸ್ವಾತಂತ್ರ್ಯ ಪಡೆಯದಿದ್ದರೆ ನಾವು ಇನ್ನೊಬ್ಬರ ಅಡಿಯಾಳಾಗಿ ಇರಬೇಕಿತ್ತು. ಅವರು ಹೇಳಿದನ್ನು ಮಾತ್ರ ಮಾಡಬೇಕಿತ್ತು. ಕೀರ್ತಿ, ಹೆಸರು, ವ್ಯಕ್ತಿತ್ವ ಇರುತ್ತಿರಲಿಲ್ಲ. ಭಾರತ ಎಂಬ ಶಬ್ದಕ್ಕೆ ವ್ಯಕ್ತಿತ್ವ ಬಂದಿದೆ. ಎಲ್ಲಾ ಸಾಧನೆಗಳಿಂದ ಪ್ರಗತಿ ಕಂಡಿದ್ದೇವೆ ಎಂದು ಹೇಳಿದರು.
50-70 ವರ್ಷದಲ್ಲಿ ಭಾರತ ಇಷ್ಟು ಎತ್ತರಕ್ಕೆ ಏರುತ್ತೆ ಎಂದು ಅವರು ಅಂದುಕೊಂಡಿರಲಿಲ್ಲ, ಇದಕ್ಕೆ ನಮ್ಮ ಹಿರಿಯರ ನಾಯಕರು ಕಾರಣ. ಕೇವಲ ದಾಸ್ಯದಿಂದ ಮುಕ್ತರಾಗಬೇಕೆಂಬ ಪ್ರಯತ್ನ ಅವರದ್ದಾಗಿತ್ತು. ಆ ಹೋರಾಟಗಾರರನ್ನು ನಾವೆಲ್ಲ ಸ್ಮರಿಸಬೇಕು. ಎಲ್ಲಾ ರೀತಿಯಿಂದಲೂ ದೇಶ ಪ್ರಗತಿ ಸಾಧಿಸಲೆಂದು ಮುಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.