ನವದೆಹಲಿ : ಭಾರತದ ಪ್ರದೇಶದಲ್ಲಿರುವ ವಿವಾದಿತ ಗಿಲ್ಜಿತ್-ಬಾಲ್ಟಿಸ್ತಾನ್ ಪ್ರದೇಶ ಪಾಕಿಸ್ತಾನಕ್ಕೆ ಸೇರಬೇಕೆಂದು ಚೀನಾ ವಿವಾದಾತ್ಮಕ ನಿಲುವು ಪ್ರಕಟಿಸಿದೆ. ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರ(ಪಿಒಕೆ) ಅಂದರೆ ಗಿಲ್ಜಿತ್-ಬಾಲ್ಟಿಸ್ತಾನ್ ಪ್ರದೇಶ ಭಾರತಕ್ಕೆ ಸೇರಿರೋದೇ ಅಲ್ಲ. ಅದು ಪಾಕಿಸ್ತಾನದ್ದೇ ಸ್ಥಿರಾಸ್ತಿ ಎಂಬ ಚೀನಾದ ಉದ್ಧಟತನದ ಹೇಳಿಕೆಗೆ ಈಗ ಭಾರತದಾದ್ಯಂತ ಉಗ್ರ ಖಂಡನೆ ವ್ಯಕ್ತವಾಗಿದೆ.

kaspak

ಚೀನಾ ಅಧಿಕೃತ ಸುದ್ದಿ ಸಂಸ್ಥೆ ತಾನು ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಗಿಲ್ಜಿತ್-ಬಾಲ್ಟಿಸ್ತಾನ್ ಪ್ರದೇಶವನ್ನು ಪಾಕಿಸ್ತಾನದ ಭಾಗ ಎಂದೇ ಬರೆದಿರುವುದು, ಭಾರತದ ಕೆಂಗಣ್ಣಿಗೆ ಕಾರಣವಾಗಿದೆ.

ಪಶ್ಚಿಮ ಚೀನಾದ ಜಿನ್ ಜಿಯಾಂಗ್ ಪ್ರದೇಶದ ಅಧಿಕಾರಿಗಳು ಖುಂಜೆರಾಬ್ ಕಣಿವೆಯನ್ನು ಚಳಿಗಾಲದ ಪ್ರಯುಕ್ತ ತಾತ್ಕಲಿಕವಾಗಿ ಮುಚ್ಚುವ ನಿರ್ಧಾರ ತೆಗೆದುಕೊಂಡಿದ್ದಾರೆ. ಖುಂಜೆರಾಬ್ ಕಣಿಕವೆಯು ಜಿಂಗ್ ಜಿಯಾಂಗ್ ಮತ್ತು ಪಾಕೀ ಆಕ್ರಮಿತ ಕಾಶ್ಮೀರ ಪ್ರದೇಶವನ್ನು ಸೇರಿಸುವ ಮುಖ್ಯ ಕೊಂಡಿಯಾಗಿದೆ.

By suddi9

Leave a Reply

Your email address will not be published. Required fields are marked *