ಮುಂಬೈ: ಬಾಲಿವುಡ್ ನ ಅತ್ಯಂತ ಬೇಡಿಕೆ ಹೀರೋಯಿನ್ ಗಳಲ್ಲೊಬ್ಬಳಾದ ಪ್ರಿಯಾಂಕಾ ಚೋಪ್ರಾ ಈಗ ಏಷ್ಯಾದ ಅತ್ಯಂತ ಮಾದಕ ಸುಂದರಿ ಎಂಬ ಪಟ್ಟವನ್ನ ಈ ವರ್ಷವೂ ಪಡೆದಿದ್ದಾರೆ. 32 ವರ್ಷದ ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ ವಿಶ್ವದ ಅತ್ಯಂತ ಸೆಕ್ಸೀ ಏಷ್ಯನ್ ಮಹಿಳೆ ಎಂಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಈಸ್ಟರ್ನ್ ಐ ಎಂಬ ಪತ್ರಿಕೆ ನಡೆಸುವ ವಾರ್ಷಿಕ ಮತದಾನದಲ್ಲಿ ಒಟ್ಟು 50 ಸುಂದರಿಯರ ಹೆಸರು ಚಾಲನೆಯಲ್ಲಿತ್ತು. ಇವರ ಪೈಕಿ ಪ್ರಿಯಾಂಕಾ ಚೋಪ್ರಾಗೆ ಎಲ್ಲರಿಗಿಂತ ಹೆಚ್ಚು ಮತ ಬಿದ್ದಿದೆ. ಪತ್ರಿಕೆಯ ಕಳೆದ ವರ್ಷದ ಮತದಾನದಲ್ಲೂ ಪ್ರಿಯಾಂಕಾ ಚೋಪ್ರಾಗೆ ಹೆಚ್ಚು ಮತಗಳು ಬಿದ್ದಿದ್ದವರು. ತನ್ನ ಗೆಲುವಿನ ಬಗ್ಗೆ ಖುಷಿಪಟ್ಟಿರುವ ಪ್ರಿಯಾಂಕಾ ಚೋಪ್ರಾ ತಮ್ಮ ಸಂತೋಷವನ್ನ ಟ್ವಿಟ್ಟರ್’ನಲ್ಲಿ ಹಂಚಿಕೊಂಡಿದ್ದಾರೆ.

