ಅಖಂಡ ಭಾರತ ಸಂಕಲ್ಪ ಪ್ರಯುಕ್ತ ಆ.11 ರಂದು ಕಲ್ಲಡ್ಕದಲ್ಲಿ ವಾಹನ ಜಾಥ
ಬಂಟ್ವಾಳ: ಹಿಂದು ಜಾಗರಣ ವೇದಿಕೆವಿಟ್ಲ ತಾಲೂಕು ಘಟಕದ ಆಶ್ರಯದಲ್ಲಿಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮವು ಆ.11 ರಂದು ಸಂಜೆ 4 ಗಂಟೆಗೆ ಕಲ್ಲಡ್ಕ ಗೇರುಕಟ್ಟೆ ಶ್ರೀಉಮಾಶಿವ ದೇವಸ್ಥಾನದ ವಠಾರದಲ್ಲಿ ನಡೆಯಲಿದೆಎಂದು ಪ್ರಕಟಣೆ ತಿಳಿಸಿದೆ.
ಇದಕ್ಕು ಮೊದಲುಮಧ್ಯಾಹ್ನ 2-30 ರಿಂದ ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ, ಮೆಲ್ಕಾರ್ ರಾಮದೇವ ಸಭಾಭವನ, ವೀರಕಂಭ ಶಾರದ ಭಜನಾ ಮಂದಿರ ಬಳಿಯಿಂದ ಏಕಕಾಲಕ್ಕೆ ವಾಹನ ಜಾಥಾವು ಶಭಾಂಗಣದತ್ತ ಸಾಗಿಬರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಗ್ರಾಮಾಂತರ ಜಿಲ್ಲೆ ಸಂಘ ಚಾಲಕರಾದ ಯಶವಂತ ಮುಲ್ಕಿ ವಹಿಸಲಿದ್ದು,ನಿವೃತ್ತ ಯೋಧಜಯ ಕುಮಾರ್ ಕೆದಿಲ ಅವರು ಗೌರವ ಉಪಸ್ಥಿತರಿರಲಿದ್ದು,, ಹಿ.ಜಾ.ವೇ.ಯ ಪ್ರಾಂತ ಕಾರ್ಯಕಾರಿಣಿ ಸದಸ್ಯೆಕುಮಾರಿ ಪ್ರಜ್ಞಾ ಕಶ್ಯಪ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.