Published On: Fri, Aug 9th, 2024

 ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರ ಸದಸ್ಯರಿಗೆ ಸಮವಸ್ತ್ರ ವಿತರಣೆ

ಬಂಟ್ವಾಳ:ತಮ್ಮ ರಕ್ಷಣೆಗೆ ಮಾಡಿಕೊಂಡು ವಿಪತ್ತು ನಿರ್ವಹಣೆ  ಮಾಡುವ ಸಲುವಾಗಿಯೇ  ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಗೆ  ಕಾಲಕಾಲಕ್ಕೆ ಸಂಬಂಧಪಟ್ಟ ನುರಿತ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ 2 ರ ನಿರ್ದೇಶಕರಾದ  ಪ್ರವೀಣ್ ಕುಮಾರ್ ರವರು ಹೇಳಿದರು.


ಹೊಸಂಗಡಿಯ ಪ್ರೇರಣಾ ಸಭಾಂಗಣ   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ವಿಟ್ಲ, ಕಾಸರಗೋಡು, ಮಂಜೇಶ್ವರ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರ ಕಾರ್ಯಕ್ರಮದಲ್ಲಿ   ಶೌರ್ಯ ತಂಡದ ಸದಸ್ಯರಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.

ಕಾಸರಗೋಡು ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷರಾದ  ಗೋಪಾಲ ಶೆಟ್ಟಿ ಅರಿಬೈಲ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರು ಕರ್ನಾಟಕ ರಾಜ್ಯದಲ್ಲಿ ಮಾಡಿರುವಂತ ಸೇವೆಯನ್ನು ಕಾಸರಗೋಡು,ಮಂಜೇಶ್ವರಕ್ಕು ವಿಸ್ತರಿಸಿದ್ದು ಅಭಿನಂದನಿಯವಾಗಿದೆ ಎಂದರು.
ಮಂಜೇಶ್ವರ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಡಾ! ಜಯಪ್ರಕಾಶ್ ತೊಟ್ಟೆತೋಡಿರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು

ಈ ಸಂದರ್ಭದಲ್ಲಿ  ವಿಟ್ಲ, ಕಾಸರಗೋಡು, ಮಂಜೇಶ್ವರ ಯೋಜನಾ ಕಚೇರಿಯ ವ್ಯಾಪ್ತಿಗೆ  ಸೇರಿದ  ಸಾಧಕ ಶೌರ್ಯ ತಂಡಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಎಲ್ಲಾ ಶೌರ್ಯ ತಂಡದ  ಸ್ವಯಂ ಸೇವಕರಿಗೆ ಸಮವಸ್ತ್ರವನ್ನು ವಿತರಿಸಲಾಯಿತು.ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ ಹಾಗೂ ಆರೋಗ್ಯ ರಕ್ಷಾ ವಿಮೆಯ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ  ಕಾಸರಗೋಡು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ  ಅಖಿಲೇಶ್ ನಗುಮುಗಂ, ಕಾಸರಗೋಡು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ  ಅಶ್ವಥ್ ಪೂಜಾರಿ ಲಾಲ್ ಬಾಗ್,  ತರಬೇತುದಾರರಾದ  ಸಂತೋಷ್ ಪೀಟರ್ ಡಿ’ಸೋಜಾ, ವಿಪತ್ತು ನಿರ್ವಹಣಾ ವಿಭಾಗದ ಯೋಜನಾಧಿಕಾರಿಗಳಾದ  ಜೈವಂತ್  ಪಟಗಾರ,ಜನಜಾಗೃತಿ ಮೇಲ್ವಿಚಾರಕರಾದ  ನಿತೇಶ್ ಕೆ, ಹಾಗೂ ಕಾಸರಗೋಡು,ಮಂಜೇಶ್ವರ ತಾಲೂಕಿನ ಮೇಲ್ವಿಚಾರಕರು,ಆಡಳಿತ ಪ್ರಬಂಧಕರು ಮತ್ತು ವಿಟ್ಲ, ಕಾಸರಗೋಡು, ಮಂಜೇಶ್ವರ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು,ಘಟಕ ಪ್ರತಿನಿಧಿ ಗಳು, ಸ್ವಯಂ ಸೇವಕರು ಉಪಸ್ಥಿತರಿದ್ದರು.

ಕ್ಷೇತ್ರ ಯೋಜನಾಧಿಕಾರಿ  ಮುಖೇಶ್ ಸ್ವಾಗತಿಸಿ, ಜನಜಾಗೃತಿ ಯೋಜನಾಧಿಕಾರಿಗಳಾದ  ಗಣೇಶ್ ಆಚಾರ್ಯ ವಂದಿಸಿದರು.ಮೇಲ್ವಿಚಾರಕರಾಕ  ಬಾಸ್ಕರ ಕಾರ್ಯಕ್ರಮ ನಿರೂಪಿಸಿದರು.
  ತರಬೇತುದಾರರಾದ  ಸಂತೋಷ ಪೀಟರ್ ಡಿ’ಸೋಜಾ ರವರು ತುರ್ತು ಸಂದರ್ಭದಲ್ಲಿ ಆತ್ಮರಕ್ಷಣೆ ಮಾಡಿಕೊಂಡು ವಿಪತ್ತು ನಿರ್ವಹಣೆ ಮಾಡುವ ವಿಧಾನಗಳ ಬಗ್ಗೆ ತರಬೇತಿ ನೀಡಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter