ಬಂಟ್ವಾಳ: ಭೂ ವಿಜ್ಞಾನಿಗಳ ಭೇಟಿ ಭೂ ಕುಸಿತಕ್ಕೀಡಾದ ಸ್ಥಳ ಪರಿಶೀಲನೆ
ಬಂಟ್ವಾಳ:ಇಲ್ಲಿನ ತುಂಬೆ ಮತ್ತು ಅಮ್ಮುಂಜೆ ಗ್ರಾಮ ಸೇರಿದಂತೆ ಪುರಸಭಾ ವ್ಯಾಪ್ತಿಯ ಗೂಡಿನ ಬಳಿ ಮತ್ತು ವಿಟ್ಲ ನಗರ ಪಂಚಾಯಿತಿ ಭೂ ಕುಸಿತಕ್ಕೀಡಾದ ಸ್ಥಳಗಳಿಗೆ ಜಿಯೋಲಾಜಿಕಲ್ ಸರ್ವೆ ಅಪ್ ಇಂಡಿಯಾ ಇದರ ಇಬ್ಬರು ವಿಜ್ಞಾನಿಗಳು ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ಕಳೆದ ಮೂರು ದಿನಗಳಿಂದ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಹಶೀಲ್ದಾರ್ ಅರ್ಚನಾ ಭಟ್ ತಿಳಿಸಿದರು.

ಜಿಲ್ಲಾ ವಿಪತ್ತು ಪ್ರಾಧಿಕಾರದ ತಾಂತ್ರಿಕ ಸಲಹೆಗಾರ ವಿಜಯ್ ಕುಮಾರ್, ಹಿರಿಯ ಭೂ ವಿಜ್ಞಾನಿಗಳಾದ ಸೆಂಥಿಲ್ ಕುಮಾರ್, ಸೋವೇಶ್,
ಕಿರಿಯ ಇಂಜಿನಿಯರ್ ಯಶವಂತ, ಕಂದಾಯ ನಿರೀಕ್ಷಕರಾದ ವಿಜಯ್, ಜನಾರ್ದನ, ಗ್ರಾಮ ಆಡಳಿತ ಅಧಿಕಾರಿ ಕರಿಬಸಪ್ಪ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಸದಾಶಿವ ಕೈಕಂಬ ಮತ್ತಿತರರು ಇದ್ದರು.