ಕಬಕ: ಕುಡಿದ ಮತ್ತಿನಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ

ಕಬಕದ ಬಳಿ ಒಂದು ಅಹಿತಕರ ಘಟನೆಯೊಂದು ನಡೆದಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ನಡುವೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಜೆ ಮದ್ಯದ ಅಮಲಿನಲ್ಲಿದ್ದ ಪ್ರಯಾಣಿಕರೊಬ್ಬರು ಗಲಾಟೆ ಮಾಡಿದ್ದಾರೆ. ಹಾಗೂ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಶಾಲಾ ಮಕ್ಕಳೂ ಸೇರಿದಂತೆ ಪ್ರಯಾಣಿಕರಿಂದ ತುಂಬಿದ್ದ ಬಸ್ ಉಪ್ಪಿನಂಗಡಿಯಿಂದ ಹೊರಟು ಕೆಮ್ಮಾರ ಬಳಿ ಬರುವಾಗ ಮಾರ್ಗ ಬದಲಾವಣೆ ಬಗ್ಗೆ ಕುಡುಕ ಹಾಗೂ ಕಂಡಕ್ಟರ್ ಮಧ್ಯೆ ಜಗಳ ಶುರುವಾಗಿದೆ.
ಇವರಿಬ್ಬರ ಜಗಳ ಹಲ್ಲೆ ಮಾಡುವವರೆಗೆ ತಿರುಗಿದೆ. ಕುಡುಕ ಪ್ರಯಾಣಿಕ ಬಸ್ಸಿನ ಕಿಟಿಕಿಯ ಗ್ಲಾಸ್ಗಳನ್ನು ಹೊಡೆದು ಕಂಡಕ್ಟರ್ ಕೈ ಹಾಗೂ ತಲೆಯ ಭಾಗಕ್ಕೆ ಹೊಡೆದಿದ್ದಾನೆ. ಗಾಯಗೊಂಡಿರು ಕಂಡಕ್ಟರ್ನ್ನು ರಫೀಕ್ ಎಂದು ಹೇಳಲಾಗಿದೆ.
ಇನ್ನು ಈ ಬಗ್ಗೆ ಸಹ ಪ್ರಯಾಣಿಕರು ಪೊಲೀಸರಿಗೆ ದೂರು ನೀಡಿದ್ದು, ಕುಡುಕ ಪ್ರಯಾಣಿಕನ್ನು ಬಂಧಿಸಿದ್ದಾರೆ. ಇನ್ನು ಪೊಲೀಸರು ಮತ್ತು ಪ್ರಯಾಣಿಕ ನಡುವೆ ಮಾತಕತೆ ನಡೆದಿದೆ. ಈ ಗಲಾಟೆಯಿಂದ ಮನೆಗೆ ಹೋಗುವ ವಿದ್ಯಾರ್ಥಿಗಳಿಗೆ ತಡವಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.