ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಅಶ್ರಯದಲ್ಲಿ ಗುರುಪೂಜಾ ಉತ್ಸವ, ಸಾಮೂಹಿಕ ಹುಟ್ಟು ಹಬ್ಬ ಮತ್ತು ಭಜನಾ ಕಾರ್ಯಕ್ರಮ ಮಧುಕರ ಸಭಾಂಗಣದಲ್ಲಿ ಆಚರಿಸಲಾಯಿತು.
ಅತಿಥಿ ಅಭ್ಯಾಗತರು ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕರಾದ ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎಂದು ತಿಳಿಸಿದರು .
ನಿವೃತ್ತ ಶಾರೀರಿಕ ಶಿಕ್ಷಣ ಶಿಕ್ಷಕರಾದ ಶಂಕರ್ ವಿ, ಬೋಳಂತೂರು, ನಿವೃತ್ತ ಮುಖ್ಯೋಪಾಧ್ಯಾಯರು ಪರಮೇಶ್ವರಯ್ಯ , ನಿವೃತ್ತ ಮುಖ್ಯ ಶಿಕ್ಷಕಿ ದೇವಕಿ, ಶ್ರೀರಾಮ ಪ್ರೌಢಶಾಲೆಯ ಮುಖ್ಯ ಗುರುಗಳಾದ ಗೋಪಾಲ್ ಶ್ರೀಮಾನ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಭಾರತಾಂಬೆಗೆ ಪುಷ್ಪಾರ್ಚನೆ ಮಾಡಿ ಎಲ್ಲಾ ಗುರು ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.
ದೃತಿ ಮತ್ತು ಚೈತನ್ಯ ಶಾರದ ಪ್ರೇರಣಾ ಗೀತೆಯನ್ನು ಹಾಡಿದರು. ಇದೇ ವೇಳೆ ಹಿರಿಯ ನಿವೃತ್ತ ಶಿಕ್ಷಕ ಶಿಕ್ಷಕರಿಗೆ ಗುರುವಂದನೆ ನಡೆಯಿತು.

ಶ್ರೀರಾಮ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಜಯರಾಮ್ ಗುರುಪೂಜೆಯ ಮಹತ್ವವನ್ನು ತಿಳಿಸಿದರು.
ಭೂಮಿಕಾ ಸ್ವಾಗತಿಸಿದರು, ದಿಶಾ ವಂದಿಸಿದರು,ಶುಭ ನಾರಾಯಣ ಭಟ್ ನಿರೂಪಿಸಿದರು
