ವಿಟ್ಲ: ಸರಕಾರಿ ಪ್ರೌಢಶಾಲೆ (RMSA)ವಿಟ್ಲ ಇಲ್ಲಿ ‘ಆಟಿಡೊಂಜಿ  ದಿನ’ಕಾರ್ಯಕ್ರಮ ವಿಜೃಂಭಣೆಯಿಂದ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲಾ  ಎಸ್.ಡಿ.ಎಂ.ಸಿ  ಅಧ್ಯಕ್ಷರಾದ ಶ್ರೀಮತಿ ರಶ್ಮಿಹರೀಶ್ ವಹಿಸಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಚಿ ಪ್ರೌಢಶಾಲಾ ಶಿಕ್ಷಕಿ ಶ್ರೀಮತಿವಿಜಯಲಕ್ಷ್ಮಿ ಕಟೀಲು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ‘ಆಟಿ ತಿಂಗಳ ವಿಶೇಷತೆ,  ತುಳುನಾಡಿನ ಪುರಾತನವಾದ ಸಂಸ್ಕಾರ, ಸಂಸ್ಕೃತಿಯು ಮುಂದಿನ ಯುವ ಪೀಳಿಗೆಗೆ  ಆದರ್ಶವಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಪ್ರಾಥಮಿಕ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ರವಿಶಂಕರ ಶಾಸ್ತ್ರಿ, ಆರ್.ಕೆ.ಆರ್ಟ್ಸ್ ನ ನಿರ್ದೇಶಕರಾದ ರಾಜೇಶ್ ವಿಟ್ಲ, ಪ್ರೌಢಶಾಲಾ ಮುಖ್ಯಶಿಕ್ಷಕಿ ಫೆಲ್ಸಿಟಾ ಈವಾ ಗಲ್ಬಾವೊ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಕೆ ಉಪಸ್ಥಿತರಿದ್ದರು.

8ನೇ ತರಗತಿ ವಿದ್ಯಾರ್ಥಿನಿಯರಾದ ಕುಮಾರಿ ಶ್ರದ್ಧಾ ರುಕ್ಮಿಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಸೀಮಾ ಸ್ವಾಗತಿಸಿ, ಕುಮಾರಿ ಸಾನ್ವಿ ಬಲ್ಲಾಳ್ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಸಂಗ್ರಹಿಸಿದ ಪೌಷ್ಠಿಕ ಆಹಾರ ಮತ್ತು ಔಷಧಿ ಸಸ್ಯಗಳ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

By Suddi9

Leave a Reply

Your email address will not be published. Required fields are marked *