ಬಂಟ್ವಾಳ: ಕಲ್ಲಡ್ಕಶ್ರೀರಾಮ ಪ್ರೌಢಶಾಲೆಯ೮ ಮತ್ತು ೯ನೇ ತರಗತಿಯ ವಿದ್ಯಾರ್ಥಿಗಳ  ಪೋಷಕರ ಸಭೆಯು ಶಾಲೆಯ  ಮಧುಕರ ಸಭಾಂಗಣದಲ್ಲಿ ಜರಗಿತು. ವಿದ್ಯಾಕೇಂದ್ರದ ಸಂಸ್ಥಾಪಕರು ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ  ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ವಿದ್ಯಾರ್ಥಿಯ ಪ್ರಗತಿಯ ಬಗ್ಗೆ ಶಿಕ್ಷಕ ಮತ್ತು ಪೋಷಕರ ಜವಾಬ್ದಾರಿಯನ್ನು ವಿವರಿಸಿದರು. 

ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಹ ಸಂಚಾಲಕರಾದ ರಮೇಶ್ ಎನ್, ಪ್ರೌಢಶಾಲೆಯ  ಶಿಕ್ಷಣ ಪರಿವೀಕ್ಷಕರಾದ  ಲಕ್ಷ್ಮೀ  ರಘುರಾಜ್, ಮುಖ್ಯೋಪಾಧ್ಯಾಯರಾದ ಗೋಪಾಲ ಎಂ ಉಪಸ್ಥಿತರಿದ್ದರು.  

 ವಿನುತಾ ಮಾತಾಜಿ  ೯ ನೇ ಹಾಗೂ  ದೀಕ್ಷಿತಾ ಮಾತಾಜಿ ೮ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ  ಪ್ರಗತಿಯ ವಿಶ್ಲೇಷಿಸಿದರು.ಇದೇ ವೇಳೆ ಶಿಕ್ಷಕರ-ಪೋಷಕರ ಸಂವಾದ ಜರಗಿತು.  ಮಾತಾಜಿಯವರಾದ  ಯಶಸ್ವಿನಿ ಸ್ವಾಗತಿಸಿದರು,ನಿಕ್ಷಿತಾ ವಂದಿಸಿದರು.

ಧೃತಿ ಕಾರ್ಯಕ್ರಮ ನಿರೂಪಿಸಿದರು,

By Suddi9

Leave a Reply

Your email address will not be published. Required fields are marked *