ಬಂಟ್ವಾಳ : ಬಿಜೆಪಿ ಮುಖಂಡ ಮಾಧವ ಮಾವೆ ತಂದೆ ಮಲಾರು ಸುಂದರ ಸಪಲ್ಯ ವಿಧಿವಶ
ಬಂಟ್ವಾಳ: ಬಿಜೆಪಿ ಮುಖಂಡ ಮಾಧವ ಮಾವೆ ರವರ ತಂದೆ ಸುಂದರ ಸಪಲ್ಯರವರು ಅಸೌಖ್ಯದಿಂದ ಸೋಮವಾರ ಮುಂಜಾನೆ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು.
ಸಾಲೆತ್ತೂರು ಗ್ರಾಮದ ಮಲಾರು ನಿವಾಸಿಯಾಗಿದ್ದ ಇವರು, ಸುತ್ತಮುತ್ತಲಿನ ಜನರಿಗೆ ಆತ್ಮೀಯರಾಗಿದ್ದು, ಭಜನೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಬಿಜೆಪಿ ಮುಖಂಡ ಮಾಧವ ಎಸ್.ಮಾವೆ ಸೇರಿದಂತೆ ಮೂವರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಪಾಲ್ತಾಜೆಯ ಅವರ ನಿವಾಸದಲ್ಲಿ ನೆರವೇರಿದೆ. ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಮತ್ತಿತರ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿ ಮೃತರ ಕುಟುಂಬಕ್ಕೆ ಧೈರ್ಯ ತುಂಬಿದರು.