ಅನಧಿಕೃತ ಪ್ಲೆಕ್ಸ್ ಅಳವಡಿಸಿದರೆ ಮೊಕದ್ದಮೆ
ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ವಾಣಿಜ್ಯ,ಸಾಮಾಜಿಕ,ರಾಜಕೀಯ ಮತ್ತು ಶೈಕ್ಷಣಿಕ ಉದ್ದೇಶದ ಬ್ಯಾನರ್, ಪ್ಲೆಕ್ಸ್ ಗಳನ್ನು ಅನುಮತಿರಹಿತವಾಗಿ ಅಳವಡಿಸುತ್ತಿದ್ದು, ಗಾಳಿ ಮಳೆಗೆ ವಾಹನ ಸವಾರರು ಮತ್ತು ಪಾದಚಾರಿಗಳ ಮೇಲೆ ಬಿದ್ದು ಅಪಾಯ ಉಂಟಾಗುವ ಸಾಧ್ಯತೆಯ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಅವುಗಳನ್ನು ಪುರಸಭೆಯ ವತಿಯಿಂದ ತೆರವುಗೊಳಿಸಲಾಗಿದೆ.
ಆದರೂ ಅಲ್ಲಲ್ಲಿ ಅನಧಿಕೃತವಾಗಿ ಪ್ಲೆಕ್ಸ್ ,ಬ್ಯಾನರ್ ಅಳವಡಿಸುತ್ತಿರುವುದು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಅನಧಿಕೃತವಾಗಿ ಅಳವಡಿಸಿದಲ್ಲಿ ಅಂತಹ ವಾಣಿಜ್ಯ ಮಳಿಗೆಗಳ ಮಾಲೀಕರ, ಕಾರ್ಯಕ್ರಮ ಆಯೋಜಕರ ಮತ್ತು ಪ್ಲೆಕ್ಸ್, ಬ್ಯಾನರ್ ತಯಾರಿಸಿ ಅಳವಡಿಸುವ ಸಂಸ್ಥೆಯ ವಿರುದ್ಧ ದೂರು ದಾಖಲಿಸಿ ಮೊಕದ್ದಮೆ ಹೂಡಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿಲೀನಾ ಬ್ರಿಟ್ಟೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.