ವಯನಾಡ್ ಸಂತ್ರಸ್ಥರಿಗೆ ಮೀಡಿದ ಮಂಗಳೂರಿಗರ ಹೃದಯ, ಎರಡು ಟ್ರಕ್ಗಳಲ್ಲಿ ಅಗತ್ಯ ವಸ್ತುಗಳ ರವಾನೆ
ಮಂಗಳೂರು: ಮಂಗಳೂರಿನ ಜನ ವಯನಾಡ್ ಸಂತ್ರಸ್ಥರಿಗೆ ಸಹಾಯಕ್ಕೆ ಧಾವಿಸಿದ್ದಾರೆ ವಯನಾಡ್ ಸಂತ್ರಸ್ಥರಿಗೆ ಎರಡು ಟ್ರಕ್ ಲೋಡ್ ಅಗತ್ಯ ವಸ್ತುಗಳ ರವಾನೆ ಮಾಡಿದ್ದಾರೆ. ಬಟ್ಟೆ, ಮೆಡಿಸಿನ್, ಅಕ್ಕಿ, ಬಿಸ್ಕೆಟ್, ದಿನಸಿ ಸಾಮಾಗ್ರಿ, ವಾಟರ್ ಬಾಟಲ್, ಸ್ಯಾನಿಟರಿ ಪ್ಯಾಡ್ ಸೇರಿದಂತೆ ಅಗತ್ಯ ವಸ್ತುಗಳ ರವಾನೆ ಮಾಡಲಾಗಿದೆ.
ಎರಡು ಟ್ರಕ್ಗಳಿಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಸಿರು ನಿಶಾನೆ ತೋರಿಸಿದ್ದಾರೆ. ಈ ಮೂಲಕ ವಯನಾಡ್ ಗೆ ಮಂಗಳೂರಿನಿಂದ ಹೊರಟ ಎರಡು ಬೃಹತ್ ಟ್ರಕ್ ಹೋಗಿದೆ. ಇನ್ನು ಮಂಗಳೂರಿನ ಜನರು ವಾಟ್ಸಪ್ ಸಂದೇಶದ ಮೂಲಕ ಅಗತ್ಯ ವಸ್ತುಗಳು ಸಂಗ್ರಹಿಸಿದ್ದಾರೆ.
ಬಿ ಹ್ಯೂಮನ್ ಮತ್ತು ಹೋಪ್ ಫೌಂಡೇಶನ್ ನಿಂದ ಸಂಗ್ರಹ ಈ ಅಗತ್ಯ ವಸ್ತುಗಳನ್ನು ಸಂಗ್ರಹ ಮಾಡಿದ್ದಾರೆ. ಮಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಈ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಇನ್ನು ಈ ಟ್ರಕ್ಗಳು ಕೇರಳದಿಂದಲ್ಲೇ ಮಂಗಳೂರಿಗೆ ಬಂದಿದೆ. ಯಾವುದೇ ತಾರತಾಮ್ಯ ಎಲ್ಲದೆ ಈ ಕಾರ್ಯಕ್ಕೆ ಸಹಕಾರಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ದಕ್ಷಿಣಕನ್ನಡ ಜಿಲ್ಲಾಧಿಕಾರಿ, ಇದು ಇತರರಿಗೂ ಮಾದರಿಯಾಗಲಿ ಎಂದು ಹೇಳಿದ್ದಾರೆ.