ಗೋಕಲ್ಲು: ಗುಡ್ಡ ಕುಸಿದು ಮಣ್ಣಿನಿಂದ ಮುಚ್ಚಿ ಹೋಗಿದ್ದ ರಸ್ತೆಯನ್ನು ಸರಿಪಡಿಸಿದ ಪಂಚಾಯತ್ ಸದಸ್ಯರು

ಕೈಕಂಬ : ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ ಗೋಕಲ್ಲು ಬಳಿ ರಸ್ತೆಗೆ ಕುಸಿದಿದ್ದ ಗುಡ್ಡದ ಮಣ್ಣು ತೆರವು ಹಾಗೂ ಅಪಾಯಕಾರಿ ಮರಗಳ ವಿಲೇವಾರಿಯನ್ನು ಪಂಚಾಯತ್ ಸದಸ್ಯರಾದ ಪ್ರವೀಣ್ ಶೆಟ್ಟಿ ಹಾಗೂ ತಮ್ಮಯ್ಯ ಪೂಜಾರಿ ನೇತೃತ್ವದಲ್ಲಿ ನಡೆಯಿತು.
ಕೈಕಂಬ, ಗಂಜಿಮಠದಿಂದ ಮಳಲಿ ಉಲ್ಲಾಸ್ ನಗರ, ಕುಕ್ಕೂರಿಗೆ ಸಂಪರ್ಕ ಕಲ್ಪಿಸುವ ಗೋಕಲ್ಲು ರಸ್ತೆಗೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಸಮೀಪದ ಗುಡ್ಡ ಕುಸಿದು ರಸ್ತೆಯು ಮುಚ್ಚಿ ಹೋಗಿತ್ತು. ತಂತಿ ಕಂಬಗಳು ಹಾಗೂ ಮರಗಳು ಮುರಿದು ಬಿದ್ದಿದ್ದು ರಸ್ತೆ ಸಂಪರ್ಕ ಹದಗಟ್ಟಿತ್ತು. ಈ ಹಿನ್ನೆಲೆ ರಸ್ತೆ ಸರಿಪಡಿಸುವಂತೆ ಗ್ರಾಮಸ್ಥರು ಪಂಚಾಯತ್ ಅನ್ನು ಆಗ್ರಹಿಸಿದ್ದರು.

ಈ ಬಗ್ಗೆ ಸ್ಥಳೀಯ ಪಂಚಾಯತ್ ಸದಸ್ಯರಾದ ಪ್ರವೀಣ್ ಶೆಟ್ಟಿ ಹಾಗೂ ತಮ್ಮಯ್ಯ ಪೂಜಾರಿ ಪಂಚಾಯತ್‌ನ ಗಮನ ಸೆಳೆದು ಬುಲ್ಡೋಝರ್ ಮೂಲಕ ರಸ್ತೆ ಸರಿಪಡಿಸಿದ್ದಾರೆ.