ಬಿ.ಸಿ.ರೋಡಿನಲ್ಲಿ ಆ.3,4 ರಂದು ಆಹಾರಮೇಳ,ಹಲಸಿನ ಹಬ್ಬ
ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಬಂಟ್ವಾಳ ನೇತ್ರಾವತಿ ಸಂಗಮ ಘಟಕ ಇದರ ಆಶ್ರಯದಲ್ಲಿ ಬೃಹತ್ ಆಹಾರ ಮೇಳ ಹಾಗೂ ಹಲಸಿನ ಹಬ್ಬ ಆ.3 ಮತ್ತು 4 ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ.
ಎರಡು ದಿನ ನಡೆಯಲಿರುವ ಶುದ್ಧ ಸಸ್ಯಹಾರಿ ಹಲಸು, ಮಾವು, ಹಾಗೂ ಹಲವು ಬಗೆಯ ಹಣ್ಣುಗಳ ವೈವಿಧ್ಯಮಯ ಆಹಾರೋತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.
ಹಲಸು, ಮಾವು, ರಾಂಬೂಟನ್, ಡ್ರಾಗನ್ ಪ್ಯೂಟ್ ಸೇರಿದಂತೆ ವಿವಿಧ ಬಗೆಯ ಸಕಾಲಿಕ ಹಣ್ಣುಗಳ ಮಾರಾಟ ವ್ಯವಸ್ಥೆ ಇದ್ದು ಹಲವು ಬಗೆಯ ಹಣ್ಣಿನ ಗಿಡಗಳ, ತೋಟಗಾರಿಕಾ ಬೆಳೆಗಳ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ನೀಡುವ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ವಿವಿಧ ಗೋಷ್ಟಿಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.