ಕುವೈತ್: ಬಿಲ್ಲವ ಸಂಘದ ದ್ವಿತೀಯ ವರ್ಷದ ವಾರ್ಷಿಕ ಮಾಹಾಸಭೆಯು  ನ.28ರಂದು ಶುಕ್ರವಾರ ಕುವ್ಯೆತ್ ಇಂಡಿಯನ್ ಕಮ್ಯೂನಿಟಿ ಸ್ಕೂಲ್  ಸಾಲ್ಮಿಯ ಸಭಾಂಗಣದಲ್ಲಿ ಜರುಗಿತು.

ಬಿಲ್ಲವ ಸಂಘದ ಸದಸ್ಯರಿಂದ ನಾನ ವಿಧದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು ತುಳುವರ ಕಲೆಯ ಸಾಮಥ್ರ್ಯವನ್ನು ತೋರಿಸಿ ನೆರೆದ ಸಭಿಕರ ಮೆಚ್ಚುಗೆಗೆ ಪಾತ್ರರಾದರು.
3

4

1

2

2

DSC_0020

 

DSC_0305

DSC_0623

DSC_0432

DSC_0405

DSC_0380

ವಾರ್ಷಿಕ ಮಾಹಾಸಭೆಯ ಅಧ್ಯಕ್ಷತೆಯನ್ನು ಮೋಹನ್ ದಾಸ್ ಪೂಜರಿಯವರು ವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಾರ್ಷಿಕ ಸ್ಮರಣಿಕೆ “ಬಿಲ್ಲವ ಬೊಲ್ಪು” ಪುಸ್ತಕದ ಬಿಡುಗಡೆ ನೆರವೇರಿಸಿದರು.

ಇದೇ ವೇಳೆ ಬಿಲ್ಲವ ಸಂಘ ಕುವೈತ್ ಇದರ ಮಹತ್ವಾಕಾಂಕ್ಷೆಯ ಯೋಜನೆಯಾದ ವಿಧ್ಯಾರ್ಥಿ ವೇತನವನ್ನು ಧಾನಿಗಳಾದ ರೋಹಿತ್ ಸನಿಲ್ ಹಾಗೂ ಸತೀಶ್ ಕುಂದರ್ ಅವರು 3 ಅರ್ಹ ವಿಧ್ಯಾರ್ಥಿಗಳಿಗೆ ವಿತರಿಸಿದರು.
ಬಿಲ್ಲವ ಸಮಿತಿಯ ಮಾಜಿ ಅಧ್ಯಕ್ಷ ಮೋಹನ್ ದಾಸ್ ಪೂಜಾರಿಯವರನ್ನು ಬಾವನಾತ್ಮಕ ವಿದಾಯ ಕೋರಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ನೂತನವಾದ ಸಮಿತಿಯ ಆಡಳಿತ ಮಂಡಳಿಯ ಸದಸ್ಯರನ್ನು ಆಯ್ಕೆಮಾಡಲಾಯಿತು.
ಅಧ್ಯಕ್ಷರಾಗಿ ಚಿತ್ರೇಕ್ ಬಂಗೇರ ಉಪಾಧ್ಯಕ್ಷರಾಗಿ ರಘು ಪೂಜಾರಿ, ಪ್ರಧಾನ ಕಾರ್ಯದರ್ಶಿ ವಿಜಯ್ ಕಾವೂರ್, ಜಂಟಿ ಕಾರ್ಯದರ್ಶಿ ಜ್ಯೋತಿ ಸುಧೀರ್ ಖಜಾಂಚಿ ಪ್ರದೀಪ್ ಕೊಟ್ಯಾನ್ ಲೆಕ್ಕಪರಿಶೋಧನಾಧಿಕಾರಿ ರಾಘವ್ ಪೂಜಾರಿ ಕ್ರೀಡಾ ಕಾರ್ಯದರ್ಶಿ ಕೃಷ್ಣ ಪೂಜಾರಿ ಸಾಂಸ್ಕೃತಿಕ ಕಾರ್ಯದರ್ಶಿ ಮಿತುನ್ ವಿಶ್ವನಾಥ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಗೋವಿಂದ್ ಬೆಳ್ಚಡ ಜಂಟಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಗದೀಶ ಪೂಜಾರಿ ಕಲ್ಯಾಣ ಅಧಿಕಾರಿ ರಾಜೇಶ್ ಪೂಜಾರಿ ಮಾಧ್ಯಮ ಕಾರ್ಯದರ್ಶಿ ಸುಷ್ಮ ಬಂಗೇರ ಸಲಹೆಗಾರರು ಮನೋಜ್ ಕುಮಾರ್ ಗೌರವ ಸಲಹೆಗಾರರಾಗಿ ಕೆ. ರವೀಂದ್ರ ಮತ್ತು
ಮೋಹನ್ ದಾಸ್ ಪೂಜಾರಿ ಯವರನ್ನು ನೇಮಿಸಲಾಯಿತು. ಕಾರ್ಯದರ್ಶಿ ಸುಷ್ಮಬಂಗೇರಾ ಸ್ವಾಗತಿಸಿ ಪ್ರ.ಕಾರ್ಯದರ್ಶಿ ವಿಜಯ್ ಕಾವೂರು ಧನ್ಯವಾದವಿತ್ತರು.ಅಧ್ಯಕ್ಷ ಚಿತ್ರೇಕ್ ಅವರು ಸರ್ವ ಸದಸ್ಯರಲ್ಲಿ ಎಲ್ಲಾ ಕಾರ್ಯಕ್ರಮಗಳಿಗೂ ಸಹಕರಿಸಿ ನಮ್ಮ ಸಮಿತಿಯು ಮುನ್ನಡೆಯಲು ಸಹಕರಿಸಲು ವಿನಂತಿಸಿದರು.

By suddi9

Leave a Reply

Your email address will not be published. Required fields are marked *