ದೇಸಿ ಸಂಸ್ಕೃಯನ್ನು ಸರಿಯಾಗಿ ಅರಿತುಕೊಳ್ಳಿ: ತಹಶೀಲ್ದಾರ್ ಡಿ ಅರ್ಚನಾ ಭಟ್
ಬಂಟ್ವಾಳ: ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಮಂಗಳೂರು ಇದರ ಬಂಟ್ವಾಳ ವಲಯದ ಆಶ್ರಯದಲ್ಲಿ ಆಟಿದ ನೆಂಪು ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮವನ್ನು ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಉದ್ಘಾಟಿಸಿದರು. ಅವರು ಮಾತನಾಡಿ ಪಾಶ್ಚತೀಕರಣ ಹಾಗೂ ಆಧುನಿಕರಣದ ಪ್ರಭಾವಕ್ಕೆ ವಾಲುವ ಬದಲು ನಮ್ಮ ದೇಸಿ ಸಂಸ್ಕೃಯನ್ನು ಸರಿಯಾಗಿ ಅರಿತುಕೊಂಡರೆ ಇಲ್ಲಿಯ ಸಂಸ್ಕೃತಿಯ ವೈಶಿಷ್ಠತೆ ಏನೆಂಬುದು ನಮಗೆ ಗೊತ್ತಾಗುತ್ತದೆ. ಆಟಿದ ಕೂಟ ಆಯೋಜಿಸುವ ಮೂಲಕ ಸಂಭ್ರಮದ ವಾತವರಣವನ್ನು ನಿರ್ಮಿಸಿರುವ ಗ್ಯಾರೇಜು ಮಾಲಕರ ಸಂಘದ ಕಾರ್ಯ ಅಭಿನಂದನೀಯ ಎಂದು ತಿಳಿಸಿದರು.
ಯಕ್ಷಗಾನ ಹಾಸ್ಯ ಕಲಾವಿದ ದಿನೇಶ್ ಶೆಟ್ಟಿಗಾರ್ ಕೋಡಪದವು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ವರ್ಷದ ಪ್ರತೀ ತಿಂಗಳು ಮುಖ್ಯವೇ. ಕಾಲ ಬದಲಾಗಿಲ್ಲ ಬದಲಾಗಿ ಮನುಷ್ಯನೇ ಬದಲಾಗಿದ್ದಾನೆ ಎಂದರು.ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ವಲಯದ ಅಧ್ಯಕ್ಷ ಸುಧೀರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಜಿಲ್ಲಾಧ್ಯಕ್ಷ ದಿವಾಕರ ಎಂ., ದ.ಕ. ಜಿಲ್ಲಾ ಗ್ಯಾರೇಜ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಅತ್ತಾವರ, ಜಿಲ್ಲಾ ಕೋಶಾಧಿಕಾರಿ ರಾಜ್ ಗೋಪಾಲ್, ವಲಯದ ಕಾರ್ಯದರ್ಶಿ ರಾಜೇಶ್ ಕುಲಾಲ್ , ಕೋಶಾಧಿಕಾರಿ ಭಾಸ್ಕರ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಧಕ ವಿದ್ಯಾರ್ಥಿಗಳಾದ ಪ್ರಣಮ್ಯ, ಶ್ರೀಜ, ರಚೇತ್ ರೈ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಕೋಡಪದವು ಅವರನ್ನು ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಿಕಟಪೂರ್ವಾಧ್ಯಕ್ಷ ಜಗದೀಶ್ ರೈ ಸ್ವಾಗತಿಸಿದರು. ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾಕರ ಸಾಲ್ಯಾನ್ ಹಾಗೂ ವಿನಾಯಕ್ ಜೆಪುö್ಪ ಕಾರ್ಯಕ್ರಮ ನಿರೂಪಿಸಿದರು. ಸಿದ್ದೀಕ್ ಮೆಲ್ಕಾರ್ ವಂದಿಸಿದರು.