Published On: Sun, Jul 28th, 2024

 ಬಂಟ್ವಾಳ: ವಿ.ಹಿ. ಪ., ಬಜರಂಗದಳದಿಂದ ರಕ್ತದಾನ ಶಿಬಿರ ಮತ್ತು ಬಾಲಸಂಸ್ಕಾರ ಕೇಂದ್ರದ ಉದ್ಘಾಟನೆ

ಬಂಟ್ವಾಳ: ವಿಶ್ವ ಹಿಂದೂ ಪರಿಷದ್, ಬಜರಂಗದಳ ಪರಶುರಾಮ ಶಾಖೆ, ಬಂಟ್ವಾಳ ನಗರ ಇದರ ಆಶ್ರಯದಲ್ಲಿ ಕೆ.ಎಸ್‌.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಮತ್ತು ರೆಡ್ ಕ್ರಾಸ್ ರಕ್ತನಿಧಿ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಮತ್ತು ಬಾಲಸಂಸ್ಕಾರ ಕೇಂದ್ರದ ಉದ್ಘಾಟನಾ ಸಮಾರಂಭ ಭಾನುವಾರ ಬಂಟ್ವಾಳ ಬೈಪಾಸ್ ನಲ್ಲಿರುವ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನ ಸಭಾಂಗಣದಲ್ಲಿ ನಡೆಯಿತು.


ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ ಉದ್ಘಾಟಿಸಿ ಶುಭಹಾರೈಸಿದರು.ಮಂಗಳೂರು ಸಂಸದ
ಕ್ಯಾ. ಬ್ರಿಜೇಶ್ ಚೌಟ ಅವರು ಕಾರ್ಯಕ್ರಮಕ್ಕೆ ಭೇಟಿ ನೀಟಿ ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.


ಬಂಟ್ವಾಳ ಶಾಸಕ  ರಾಜೇಶ್ ನ್ಯಾಕ್ ಉಳಿಪಾಡಿಗುತ್ತು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಸ್ತುತ ಸಮಯದಲ್ಲಿ ಅತೀ ಅವಶ್ಯಕ ಮತ್ತು ಅಗತ್ಯವಾದ ರಕ್ತವನ್ನು ದಾನದ ರೂಪದಲ್ಲಿ ಪಡೆದು ಇನ್ನೊಂದು  ಜೀವವನ್ನು ಉಳಿಸುವ ಕಾರ್ಯವನ್ನು ಮಾಡುತ್ತಿರುವ  ಸಂಘಟನೆ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು.

ಡೆಂಗ್ಯೂ ಜ್ವರದ ಪ್ರಕರಣಗಳು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಆಸ್ಪತ್ರೆಯಲ್ಲಿ ಅನೇಕರು ಚಿಕಿತ್ಸೆ ಪಡೆಯುತ್ತಿದ್ದು, ಅಗತ್ಯ ಸಮಯದಲ್ಲಿ ಜೀವವನ್ನು ಉಳಿಸಿಕೊಳ್ಳಲು ರಕ್ತದ ಅವಶ್ಯಕತೆ ಇದ್ದು,ಈ ಸಂದರ್ಭ ಸಂಘಟನೆ ಮಾಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.


ವಿ.ಹಿಂ.ಪ.ಪುತ್ತೂರು ಅಧ್ಯಕ್ಷ ಡಾ. ಕೃಷ್ಣಪ್ರಸನ್ನ, ಬಜರಂಗಳ ಜಿಲ್ಲಾ ಸಂಯೋಜಕ ಭರತ್‌ ಕುಮ್ಡೇಲು,ತಾಲೂಕು ಅಧ್ಯಕ್ಷ  ಪ್ರಸಾದ್ ಕುಮಾರ್ ರೈ, ಬಜರಂಗದಳ ಪುತ್ತೂರು ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ, ಬಜರಂಗದಳದ ಬಂಟ್ವಾಳ ಸಂಚಾಲಕ  ಶಿವಪ್ರಸಾದ್ ತುಂಬೆ, ಹೆಚ್.ಡಿ.ಎಫ್.ಸಿ. ಬ್ಯಾಂಕ್ ಅಧಿಕಾರಿ ಲೋಕೇಶ್ ,ಬಜರಂಗದಳ ಸೇವಾ ಪ್ರಮುಖ್  ಪ್ರಸಾದ್ ಬೆಂಜನಪದವು, ಸಮಾಜ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಲಾಲ್ ,  ಧರ್ಮ ಪ್ರಸರಣದ  ಪ್ರಮುಖ್ ಮನೋಹರ ಕಲ್ಲಡ್ಕ, ಮಾತೃ ಶಕ್ತಿ ಪ್ರಮುಖ್ ಸೌಮ್ಯ ರಾಣಿ,ಗ್ರಾಮ ವಿಕಾಸ ಸಂಯೋಜಕ ಸುಜಿತ್ ಕಲ್ಲಡ್ಕ,ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಗಣೇಶ್ ಕುಮಾರ್, ಬ್ಲಡ್ ಬ್ಯಾಂಕ್ ನ ಸಂಯೋಜಕ ಪ್ರವೀಣ್ ಕುಮಾರ್, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷ ವಿಜಯ ಅಮ್ಟಾಡಿ, ವಿಶ್ವ ಹಿಂದೂ ಪರಿಷತ್ ಪರಶುರಾಮ ಶಾಖೆ ಬಂಟ್ವಾಳ ಘಟಕದ ಅಧ್ಯಕ್ಷ ಪುರುಷೋತ್ತಮ ಹೊಸಮನೆ ಉಪಸ್ಥಿತರಿದ್ದರು.
ಸಂತೋಷ್ ಸರಪಾಡಿ ಸ್ವಾಗತಿಸಿದರು, ದೀಪಕ್ ಅಜೆಕಲ ವಂದಿಸಿದರು.ಸಂಧ್ಯಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter