ಶ್ರೀಸಾಯಿ ಕಿಡ್ ಝೋನ್ ನಲ್ಲಿ “ಆಟಿದ ಕೂಟ”
ಬಂಟ್ವಾಳ: ಶ್ರೀಸಾಯಿ ಕಿಡ್ ಝೋನ್ ಇದರಆಶ್ರಯದಲ್ಲಿ ಶಿಕ್ಷಕ ರಕ್ಷಕ ಸಮಿತಿಯ ಸಹಯೋಗದೊಂದಿಗೆ ಆಟಿದ ಕೂಟ ಕಾರ್ಯಕ್ರಮ ಶನಿವಾರ ಬಿ.ಸಿ.ರೋಡಿನ ಸಾಯಿ ಕಿಡ್‌ಝೋನ್‌ನ ಸಭಾಂಗಣದಲ್ಲಿ ನಡೆಯಿತು.

ಜೆಸಿಐ ವಲಯ ತರಬೇತುದಾರ(ಪ್ರೋವಿಜನಲ್), ಪತ್ರಕರ್ತ ಸಂದೀಪ್ ಸಾಲ್ಯಾನ್ ಆಟಿದ ಕೂಟ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳ ಆರ್ಟ್ ಕ್ರಾಪ್ಟ್ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಹಿರಿಯರಿಗೆ ಆಟಿ ಕಷ್ಟದ ತಿಂಗಳು ಆಗಿದ್ದರೂ ಕೂಡ ಆ ತಿಂಗಳಿನಲ್ಲಿದ್ದ ವೈಶಿಷ್ಠ ಪೂರ್ಣ ಆಚರಣೆಗಳು ತುಳುವರ ವೈಚಾರಿಕತೆಯ ಬದುಕನ್ನು, ಕಷ್ಟದ ಸಂದರ್ಭದಲ್ಲೂ ಪರಸ್ಪರ ಹೊಂದಿಕೊಂಡು ಬದುಕುವ ಜೀವನ ವಿಧಾನವನ್ನು ಅನಾವರಣಗೊಳಿಸುತ್ತದೆ.
ಆಟಿಯ ಒಂದೊಂದು ಆಚರಣೆಯ ಹಿಂದೆಯೂ ತನ್ನದೇ ಆದ ಉದ್ದೇಶ, ದೂರದೃಷ್ಟಿ ಚಿಂತನೆ ಹಾಗೂ ಅಧ್ಯಯನಕ್ಕೆ ಯೋಗ್ಯವಾಗುವಂತ ವಿಚಾರಗಳಿರುವುದನ್ನು ಕಾಣಬಹುದಾಗಿದೆ. ತುಳುನಾಡಿನ ವಿಶಿಷ್ಠ ಪರಂಪರೆ, ಆಚರಣೆಗಳನ್ನು ಮಕ್ಕಳಿಗೆ ಪೋಷಕರು ತಿಳಿಸಿಕೊಡಬೇಕಾಗಿದೆ. ಇಷ್ಟೆಲ್ಲಾ ವೈಶಿಷ್ಯತೆಗಳಿರುವ ಆಟಿ ನಿಜಾರ್ಥದಲ್ಲಿ ತುಳುನಾಡಿನ ಬ್ಯೂಟಿ ಎಂದು ವಿವರಿಸಿದರು.
ಸಂಸ್ಥೆಯ ಸಂಚಾಲಕ ಐತಪ್ಪ ಪೂಜಾರಿಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿಟಿಎ ಅಧ್ಯಕ್ಷ ಜ್ಞಾನೇಶ್ ಜಿ. ರಾವ್, ಉಪಾಧ್ಯಕ್ಷೆ ಸುಪ್ರಿತಾ, ಕೋಶಧಿಕಾರಿ ದೇವೇಂದ್ರಪ್ಪ, ಶ್ರೀ ಸಾಯಿ ಎಜುಕೇಷನಲ್ ಟ್ರಸ್ಟ್ನ ಕೋಶಾಧಿಕಾರಿ ರಾಜೇಶ್ ಅಮೀನ್ ಅಥಿಗಳಾಗಿ ಭಾಗವಹಿಸಿದ್ದರು. ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ದೀಕ್ಷಿತಾ ಸ್ವಾಗತಿಸಿದರು, ಸಹಶಿಕ್ಷಕಿ ಪುಷ್ಪಲತಾ ವಂದಿಸಿದರು. ಆಡಳಿತ ಸಮಿತಿ ಸದಸ್ಯೆ ಆರತಿ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ವಿದ್ಯಾಥಿಗಳಿಂದ ತುಳುನಾಡಿನ ವೈಭವ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ತಯಾರಿಸಿದ ಕ್ರಾಪ್ಟ್ ವಸ್ತುಗಳ ಪ್ರದರ್ಶನ, ಆಟಿ ತಿಂಗಳ ವಿವಿಧ ಆಹಾರ ಖಾದ್ಯಗಳ ಪ್ರದರ್ಶನ ಹಾಗೂ ಸಹಭೋಜನ ನಡೆಯಿತು.