ಹೊಸದಾಗಿ ಜಾರಿಗೆ ಕಾನೂನುಗಳ ಕುರಿತ ಮಾಹಿತಿ ಕಾರ್ಯಗಾರ
ಬಂಟ್ವಾಳ: ವಕೀಲರ ಸಂಘ (ರಿ), ಬಂಟ್ವಾಳ ಹಾಗೂ ಅಧಿವಕ್ತ ಪರಿಷತ್ ಕರ್ನಾಟಕ- ಬಂಟ್ವಾಳ ಘಟಕ ಸಹಯೋಗದಲ್ಲಿ ಹೊಸದಾಗಿ ಜಾರಿಗೆ ಬಂದ ಮೂರು ಕಾನೂನುಗಳ ಕುರಿತ ಮಾಹಿತಿ ಕಾರ್ಯಗಾರವು ಬಂಟ್ವಾಳ ನ್ಯಾಯಾಲಯದ ಆವರಣದಲ್ಲಿ ನಡೆಯಿತು.

ಬಂಟ್ವಾಳದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಭಾಗ್ಯಮ್ಮಾವರು ಕಾರ್ಯಾಗಾರ ಉದ್ಘಾಟಿಸಿ ಚಾಲನೆಯನ್ನು ನೀಡಿದರು. ಪ್ರದಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ವೈ. ತಳವಾರ, ಹೆಚ್ಚುವರಿ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಕೃಷ್ಣಮೂರ್ತಿ ಏನ್, ಅಧಿವಕ್ತ ಪರಿಷತ್ ಬಂಟ್ವಾಳ ಘಟಕದ ಅಧ್ಯಕ್ಷರಾದ ಉಮಾ ಏನ್ ಸೋಮಯಾಜಿ ಅವರು ಉಪಸ್ಥಿತರಿದ್ದರು.
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷರಾದ ರಿಚರ್ಡ್ ಕೊಸ್ತಾ ಎಂ. ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರಿನ ಹಿರಿಯ ವಕೀಲರಾದ ಪರಮೇಶ್ವರ ಜೋಯಿಷ್ ಅವರು ಹೊಸ ಮೂರು ಕಾನೂನುಗಳ ಬಗ್ಗೆ ಮಾಹಿತಿನೀಡಿ ಸಂವಾದ ನಡೆಸಿದರು.
ಹಿರಿಯ ಹಾಗೂ ಕಿರಿಯ ವಕೀಲರು ಕಾರ್ಯಕ್ರಮದಲ್ಲಿ ಹಾಜರಿದ್ದರು. ವಕೀಲ ವೀರೇಂದ್ರ ಎಂ.ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.