ತಿರುವೈಲು ಕೆಲರೈಕೋಡಿಯಲ್ಲಿ ವಿದ್ಯುತ್ ವೈಫಲ್ಯದ ಜಟಿಲ ಸಮಸ್ಯೆ
ಕತ್ತಲಿನಿಂದ ಬೆಳಕಿನೆಡೆಗೆ ತನ್ನಿ : ಸ್ಥಳೀಯರಿಂದ ಬೇಸರದ ನುಡಿ
ಕೈಕಂಬ: ಮಂಗಳೂರು ನಗರ ಪಾಲಿಕೆಯ(ಮನಪಾ) ೨೦ನೇ ತಿರುವೈಲು ವಾರ್ಡ್ನ ಕೆಲರೈಕೋಡಿ ೨ನೇ ಬ್ಲಾಕ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ಪದೇಪದೇ ವಿದ್ಯುತ್ ಕೈಕೊಡುತ್ತಿದ್ದು, ಈ ಬಗ್ಗೆ ದೂರು ನೀಡಲಾಗಿದ್ದರೂ ಈವರೆಗೆ ಮೆಸ್ಕಾಂ ಅಥವಾ ಜನಪ್ರತಿನಿಧಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಸ್ಥಳೀಯ ನಿವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ವಿದ್ಯುತ್ ಕಂಬಗಳಿವೆ, ತಂತಿಗಳು ಹರಿದಿವೆ. ಟ್ರಾನ್ಸ್ಫಾರ್ಮರ್ ಕೂಡಾ ಇದೆ. ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕವಿದೆ. ಇಷ್ಟಿದ್ದರೂ ಇಲ್ಲಿನ ಒಂದೇ ಪ್ರದೇಶದ ೯ ಮನೆಗಳವರು ನಿರಂತರ ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ. ದೂರಿಕೊಂಡರೆ ಸ್ಥಳೀಯ ಮೆಸ್ಕಾಂ ಕಚೇರಿಯಿಂದ ಸೂಕ್ತ ಸ್ಪಂದನೆ ಇಲ್ಲ. ಮಂಗಳೂರಿನ ಮೆಸ್ಕಾಂ ಆನ್‌ಲೈನ್ ಸಂಖ್ಯೆಗೆ ಕರೆ ಮಾಡಿದರೆ ದೂರು ಸ್ವೀಕರಿಸಿ ನಾಲ್ಕೆÊದು ತಾಸಿನ ಬಳಿಕ ದೂರುದಾರರ ವಿದ್ಯುತ್ ಸಮಸ್ಯೆ ಸರಿಪಡಿಸಲಾಗಿದೆ' ಎಂಬ ಉತ್ತರ ಬರುತ್ತದೆ. ವಾಸ್ತವದಲ್ಲಿ ಮನೆಯ ಹತ್ತಿರ ಯಾವೊಬ್ಬ ಲೈನ್‌ಮ್ಯಾನ್ ಸುಳಿದಾಡದಿದ್ದರೂ, ದುರಸ್ತಿ ಮಾಡಲಾದ ಬಗ್ಗೆ ಸ್ಥಳೀಯ ಮೆಸ್ಕಾಂನಿAದ ಮುಖ್ಯ ಕಚೇರಿಗೆ ಅಪ್ ಡೇಟ್ ಮಾಡಲಾಗುತ್ತದೆ ಎಂದು ಆರೋಪಿಸಿರುವ ಕೆಲರೈಕೋಡಿ ಬ್ಲಾಕ್ ೨ರ ನಿವಾಸಿಗರು, ಇದು ಇಲ್ಲಿ
ಮೆಸ್ಕಾಂನ ಅದ್ಭುತ ಸೇವೆ’ ಎಂದು ವ್ಯಂಗ್ಯವಾಡಿದ್ದಾರೆ.

ಕೆಲರೈಕೋಡಿಯ ದೀಕ್ಷಿತಾ, ನಳಿನಾಕ್ಷಿ, ಕವಿತಾ, ಹೇಮಲತಾ, ಭಾಸ್ಕರ ಪೂಜಾರಿ, ಗುರುವಪ್ಪ ಪೂಜಾರಿ, ವಿಶ್ವನಾಥ ಪೂಜಾರಿ, ವಸಂತ ಆಚಾರ್ಯ, ರಾಕೇಶ್ ಡಿ’ಸೋಜ, ಜಗದೀಶ ಪೂಜಾರಿ, ಲೋಹಿತ್ ಮತ್ತಿತರರು ದಿನನಿತ್ಯ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ಬಹುತೇಕ ದಿನಗಳಲ್ಲಿ ದಿನದ ಒಂದು ಗಂಟೆಯೂ ವಿದ್ಯುತ್ ಇರುವುದಿಲ್ಲ. ಕೆಲವೊಮ್ಮೆ ಒಂದೆರಡು ದಿನ ವಿದ್ಯುತ್ ಸುಳಿದಾಡುವುದಿಲ್ಲ ಎಂದಿದ್ದಾರೆ.

“ಇಲ್ಲಿ ಕಡಿಮೆ ಲೋಡ್ ಸಾಮರ್ಥ್ಯದ ವಿದ್ಯುತ್ ಟ್ರಾನ್ಸ್ಫಾರ್ಮರ್ ಇದ್ದು, ಹೆಚ್ಚುವರಿ ಸಾಮರ್ಥ್ಯದ ಟಿ.ಸಿ ಅಳವಡಿಸುವಂತೆ ಸ್ಥಳೀಯರು ಕೆಲವು ವರ್ಷದ ಹಿಂದಿನಿAದಲೂ ಮೆಸ್ಕಾಂ ವಾಮಂಜೂರು ಕಚೇರಿಗೆ ಬೇಡಿಕೆ ಇಟ್ಟಿದ್ದಾರೆ. ಬೇಡಿಕೆ ನೆನಗುದಿಗೆ ಬಿದ್ದಿದ್ದು, ಸ್ಥಳೀಯರು ನಿತ್ಯ ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ” ಎಂದು ಪತ್ರಿಕಾ ವಿತರಕ ಹರೀಶ್ ಕುಡುಪು ಹೇಳಿದರು.
“ಹೆಚ್ಚಿನ ದಿನಗಳಲ್ಲಿ ವಿದ್ಯುತ್ ಇಲ್ಲದೆ ಮನೆ ಮಕ್ಕಳಿಗೆ ಓದಲು ಸಮಸ್ಯೆಯಾಗುತ್ತಿದೆ. ಸುತ್ತಲು ತೋಟ ಇರುವುದರಿಂದ ಸೊಳ್ಳೆ ಕಾಟ ತಪ್ಪಿಲ್ಲ. ರೋಗರುಜಿನ ಭೀತಿಯೂ ಇದೆ. ಹತ್ತಿರದ ದಾರಿದೀಪಗಳು ಉರಿಯದೆ ರಾತ್ರಿ ವೇಳೆ ಪರಿಸರದಲ್ಲಿ ಕರ್ಗತ್ತಲು ತುಂಬಿರುತ್ತದೆ. ವಾಮಂಜೂರು ಮೆಸ್ಕಾಂ ಕಚೇರಿಗೆ ಕರೆ ಮಾಡಿದರೆ, ಸಿಬ್ಬಂದಿಯಿAದ ಸಿಬ್ಬಂದಿ ಇಲ್ಲ ಎಂಬ ಉತ್ತರ ಬರುತ್ತದೆ. ದೂರುಗಳಿಗೆ ಸ್ಪಂದಿಸಿ ಸ್ಥಳೀಯರಿಗೆ ನಿರಂತರ ವಿದ್ಯುತ್‌ಗೆ ವ್ಯವಸ್ಥೆ ಮಾಡಿಕೊಡಿ. ಶಾಸಕ ಡಾ. ಭರತ್ ಶೆಟ್ಟಿ ಹಾಗೂ ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಅವರಿಗೂ ಮನವಿ ಮಾಡಿಕೊಂಡಿದ್ದೇವೆ” ಎಂದು ಸ್ಥಳೀಯ ನಿವಾಸಿ ದೀಕ್ಷಿತಾ ಹೇಳಿದರು.
“ವಾಮಂಜೂರಿನ ಮೆಸ್ಕಾಂ ಕಚೇರಿಗೆ ದೂರು ನೀಡಿದಾಗ, ನಮ್ಮಲ್ಲಿ ೬ ಮಂದಿ ಮಾತ್ರ ಸಿಬ್ಬಂದಿ ಇದ್ದಾರೆ. ಮರ‍್ನಾಲ್ಕು ದಿನಗಳಿಂದ ಕೆಲವು ದೂರುಗಳು ಬಂದಿದ್ದು, ಒಂದಾದ ಬಳಿಕ ಒಂದು ದೂರು ಪರಿಶೀಲಿಸುತ್ತಾ ಹೋಗುತ್ತೇವೆ ಎಂದು ಉತ್ತರಿಸುತ್ತಾರೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಮೆಸ್ಕಾಂ ಸ್ಪಂದನೆ ಹೇಗಿರುತ್ತದೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ಸ್ಥಳೀಯ ನಾಗರಿಕರೊಬ್ಬರು ಹೇಳಿದ್ದಾರೆ.

“ಗುರುವಾರದಂದು ಮನಪಾ ಕೌನ್ಸಿಲ್ ಸಭೆ ನಡೆಯಲಿದೆ. ಸಭೆಯಲ್ಲಿ ಕೆಲರೈಕೋಡಿ ನಿವಾಸಿಗರ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಕೋರಿ ಮಂಗಳೂರು ಮೆಸ್ಕಾಂಗೆ ಮನವಿ ಮಾಡಲಿದ್ದೇನೆ. ದೂರುದಾರ ಮನೆಯ ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಥಳಾಂತರಿಸುವಾಗ ಹೆಚ್ಚುವರಿ ಸಾಮರ್ಥ್ಯದ ಟಿ.ಸಿ ಅಳವಡಿಸಲು ಮೆಸ್ಕಾಂಗೆ ಸೂಚಿಸಲಾಗುವುದು. ಕೆಲರೈಕೋಡಿಗರ ವಿದ್ಯುತ್ ಸಮಸ್ಯೆ ಬಗೆಹರಿಸಲು ಹಿಂದೆಯೂ ಹಲವು ಬಾರಿ ಪ್ರಯತ್ನಿಸಿದ್ದೆ. ಪ್ರತಿ ಬಾರಿ ದೂರು ನೀಡಿದಾಗ ಸಮಸ್ಯೆ ಬಗೆಹರಿಯುತ್ತದೆ. ಮತ್ತದೇ ಸಮಸ್ಯೆ ಕಾಣಿಸಿಕೊಳ್ಳುತ್ತದೆ” ಎಂದು ತಿರುವೈಲ್ ವಾರ್ಡ್ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್ ಮಾಹಿತಿ ನೀಡಿದರು.
`ಕೆಲರೈಕೋಡಿಯಲ್ಲಿ ವಿದ್ಯುತ್ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಅಲ್ಲಿನ ನಿವಾಸಿಗರಿಂದ ದೂರು ಬಂದಿದ್ದು, ತಂತಿಗಳಿಗೆ ತಾಗಿಕೊಂಡಿದ್ದ ಮರದ ಗೆಲ್ಲುಗಳನ್ನು ಟ್ರಿಮ್ ಮಾಡಿ ಮಂಗಳವಾರ ಸಂಜೆಯೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಯಾವುದೇ ದೂರುಗಳಿಗೆ ತಕ್ಷಣ ಸ್ಪಂದಿಸಲು ಸಿಬ್ಬಂದಿಗೆ ಸೂಚಿಸಿದ್ದೇನೆ. ವಾಮಂಜೂರು ಮೆಸ್ಕಾಂ ಕಚೇರಿಗೆ ಹೊಸದಾಗಿ ನಿಯುಕ್ತಿಗೊಂಡಿದ್ದೇನೆ. ಇಲ್ಲಿ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳ ಮಾಹಿತಿ ಪಡೆದುಕೊಂಡು ಅಗತ್ಯ ಕ್ರಮ ಜರುಗಿಸಲಾಗುವುದು” ಎಂದು ವಾಮಂಜೂರು ಮೆಸ್ಕಾಂ ಕಚೇರಿ ಜ್ಯೂನಿಯರ್ ಇಂಜಿನಿಯರ್(ಜೆಇ) ರಾಜೇಶ್ ಹೇಳಿದರ
ಧನಂಜಯ ಗುರುಪುರ