ಬಂಟ್ವಾಳ: ಮುಂದುವರಿದ ಮಳೆ ಹಾನಿ
ಬಂಟ್ವಾಳ : ಎರಡುದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಗಾಳಿಗೆ ಗುರುವಾರ ನದಿಯಲ್ಲಿ ಬೆಳಗ್ಗಿನ ಹೊತ್ತು ನೇತ್ರಾವತಿ ನದಿಯಲ್ಲಿ ಏರಿಕೆಯಾಗಿ 7.3 ರಲ್ಲಿ ಹರಿದಿದ್ದು,ಸಂಜೆಯ ವೇಳೆಗೆ ಇಳಿಮುಖವಾಗಿದೆ.
ಹಾಗೆಯೇ ಗಾಳಿ,ಮಳೆಗೆ ಬಂಟ್ವಾಳದ ವಿವಿದೆಡೆಯಲ್ಲಿ ಹಾನಿ ಕೂಡ ಮುಂದುವರಿದಿದೆ. ಕಡೇಶಿವಾಲಯ ಗ್ರಾಮದಲ್ಲಿ ಗಾಳಿಯಿಂದಾಗಿ ವನೀತ ಬಿ.ರೈ ಮತ್ತು ಎನ್ .ವೀರಪ್ಪ ನಾಯ್ಕರ ತೋಟದಲ್ಲಿ 600 ಫಲ ಬರುವ ಅಡಿಕೆ ಮರ ಹಾಗೂ ತೆಂಗಿನ ಮರಗಳು ಬಿದ್ದು ಹಾನಿಯಾಗಿರುತ್ತದೆ.
ಮಾಣಿಲ ಗ್ರಾಮದ ದಂಡೆಪ್ಪಾಡಿ ಎಂಬಲ್ಲಿ, ರಾಮ ಮೂಲ್ಯ ಎಂಬವರ ಮನೆ, ಕೊಟ್ಟಿಗೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ. ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ಜಾನಕಿ ಅವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.ಮನೆಯಲ್ಲಿ ಯಾರು ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ.
ಪುಣಚ ಗ್ರಾಮದ ಬೇರಿಕೆ ಎಂಬಲ್ಲಿ ನಾರಾಯಣ ನಾಯ್ಕ ರವರ ಮನೆಗೆ ತಾಗಿಕೊಂಡಿರುವ ಕೊಟ್ಟಿಗೆಗೆ ಹಾನಿಯಾದರೆ,ಇಡ್ಕಿದುಗ್ರಾಮದಅಬ್ದುಲ್ ರಹಿಮಾನ್ ಮನೆಗೆ ಮರ ಬಿದ್ದು ಹಾನಿಯಾಗಿರುತ್ತದೆ.
ಮನೆಮಂದಿಯನ್ನು ಸ್ಥಳಾಂತರಿಸಲಾಗಿದೆ.ಬಿ ಮೂಡ ಗ್ರಾಮದ ಮೊಡಂಕಾಪು ಎಂಬಲ್ಲಿ ದಿನೇಶ್ ಅವರ ವಾಸದ ಮನೆಯ ಗೋಡೆ ಕುಸಿದು ಬಿದ್ದಿರುತ್ತದೆ. ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ನಿವಾಸಿ ಇಸ್ಮಾಯಿಲ್ ಮದನಿ ಎಂಬವರ ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಮನೆಗೆ ಹಾನಿಯಾಗಿರುತ್ತದೆ.