ಆಧ್ಯಾತ್ಮಿಕ ಸಾಧನೆಯಿಂದ ಅಂತರಂಗದಲ್ಲಿ ರಾಮರಾಜ್ಯದ ಸ್ಥಾಪನೆ: ಡಾ. ಪ್ರಣವ್ ಮಲ್ಯ
ಬಂಟ್ವಾಳ: ಆಧ್ಯಾತ್ಮಿಕ ಸಾಧನೆಯಿಂದ ಅಂತರಂಗದಲ್ಲಿ ರಾಮರಾಜ್ಯದ ಸ್ಥಾಪನೆ ಮಾಡಬಹುದು, ಆದರೆ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನದಲ್ಲಿ ರಾಮರಾಜ್ಯದ ಸ್ಥಾಪನೆಗಾಗಿ ನಾವು ಕರ್ತವ್ಯನಿಷ್ಕರಾಗಿ ನಿಭಾಯಿಸುವುದರೊಂದಿಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ. ನಮ್ಮ ಆಚಾರ-ವಿಚಾರಗಳು ಹಿಂದೂ ಸಂಸ್ಕೃತಿಗನುಸಾರವಾಗಿರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಡಾ. ಪ್ರಣವ್ ಮಲ್ಯ ಹೇಳಿದ್ದಾರೆ.
ಬಿ ಸಿ ರೋಡ್ ನ ಗೀತಾಂಜಲಿ ಸಭಾಂಗಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಆಶ್ರಯದಲ್ಲಿ ಭಾನುವಾರ ಸಂಜೆ ನಡೆಷ ಗುರುಪೂರ್ಣಿಮಾ ಮಹೋತ್ಸವದ ಸಭಾಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣಗೈದರು.
‘ಕೀರ್ತನೆ-ಭಜನೆ ನಮ್ಮ ಸಂಸ್ಕೃತಿಯಾಗಿದ್ದು, ‘ರಾಮ-ಕೃಷ್ಣ ನಮಗೆ ಆದರ್ಶವಾಗಿದ್ದಾರೆ. ನಮ್ಮ ನಿತ್ಯ ವ್ಯವಹಾರದಲ್ಲಿ ನಮ್ಮ ಸಂಸ್ಕೃತಿಯ ರಕ್ಷಣೆ ಮತ್ತು ಪಾಲನೆ ಮಾಡಬೇಕೆಂದರು.
ಅತಿಥೊಯಾಗಿ ಭಾಗವಹಿಸಿದ್ದ ನ್ಯಾಯವಾದಿ ಸತೀಶ್ ಅವರು ಮಾತನಾಡಿ ,ಹಿಂದೂ ಧರ್ಮವು ಜಗತ್ತಿಗೆ ಆದರ್ಶವಾಗಿದೆ. ದೇಶದ ಸಂಸ್ಕೃತಿಯನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸಮಾಜವನ್ನು ಸದೃಢ ಮತ್ತು ಬಲಿಷ್ಠ ಮಾಡುವುದು ಜಾಗೃತ ಪ್ರಜೆಯಿಂದ ಸಾಧ್ಯ ಎಂದರು
ಪ್ರಮುಖರಾದ ಡಾ.ಬಾಲಕೃಷ್ಣ ಡಾ.ಶಿವಪ್ರಸಾದ್ ಶೆಟ್ಟಿ,ಸುಧಾಕರ್ ಶೆಟ್ಟಿ, ಸಂದೀಪ್ ಬಡಗಬೆಳ್ಳೂರು,ಶಿವಶಂಕರ್ ಭಟ್, ಜ್ಯೋತಿಷಿಗಳಾದ ಅನಿಲ್ ಪಂಡಿತ್, ಯಕ್ಷಗಾನ ಕಲಾವಿದರಾದ ಅಶೋಕ್ ಸರಪಾಡಿ, ವೈದ್ಯರಾದ ಡಾ.ಸತ್ಯಶಂಕರ್ ಭಟ್, ಪ್ರಾಧ್ಯಾವಕರಾದ ಗಿರೀಶ್ ಹೆಗ್ಡೆ, ಮುಂತಾದವರು ಉಪಸ್ಥಿತಿತರಿದ್ದರು.
ಬೆಳಿಗ್ಗೆ ಸಜೀಪಮಾಗಣೆ ತಂತ್ರಿಗಳಾದ ಎಂ.ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಶ್ರೀ ವ್ಯಾಸ ಪೂಜೆ ಮತ್ತು ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆ ನೆರವೇರಿಸಲಾಯಿತು.