ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ
ಬಂಟ್ವಾಳ: ಚಿಣ್ಣರಲೋಕ ಸೇವಾ ಬಂಧು (ರಿ) ಬಂಟ್ವಾಳ, ಚಿಣ್ಣರಲೋಕ ಮೋಕೆದ ಕಲಾವಿದರು ಸೇವಾ ಟ್ರಸ್ಟ್ (ರಿ) ಬಂಟ್ವಾಳ,ಹಾಗೂ ಎ. ಜೆ. ವೈದ್ಯಕೀಯ ಮಹಾ ವಿದ್ಯಾಲಯ ಮಂಗಳೂರು ಇದರ ಸಹಯೋಗದಲ್ಲಿ “ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ” ವು ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಪನೋಲಿಬೈಲ್ ಶ್ರೀ ಕೃಷ್ಣಯುವಕ ಮಂಡಲ ವಠಾರದಲ್ಲಿ ನಡೆಯಿತು.
ಸಜಿಪಮೂಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಶೆಟ್ಟಿ ದೀಪ ಬೆಳಗಿಸುವ ಮೂಲಕ ಶಿಬಿರದ ಉದ್ಘಾಟನೆಗೈದರು, ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಂಚಾಯತ್ ಉಪಾಧ್ಯಕ್ಷೆ ಫೌಝಿಯ, ಪಂಚಾಯತ್ ಸದಸ್ಯರಾದ ವಿಶ್ವನಾಥ ಬೆಳ್ಚಡ, ಯಮುನ,ಸೀತಾರಾಮ ಅಗೊಳಿಬೆಟ್ಟು, ಪ್ರಶಾಂತ,ಸೋಮನಾಥ,ಸುಂದರಿ, ಮಾಜಿ ಗ್ರಾಮ ಪಂಚಾಯಿತ್ ಸದಸ್ಯರಾದ ರಮೇಶ್ ಪನೋಲಿಬೈಲು,ಡಾ.ವಾಮನ್ ಪಿ, ಡಾ.ಎಂ. ಎಂ.ತುಫೈಲ್,ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ,ಪನೊಲಿಬೈಲ್ ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ, ಶಾರದಾ ಯುವಕ ಮಂಡಲ ಅಧ್ಯಕ್ಷ ಪರಮೇಶ್ವರ ಎಸ್, ಸದಸ್ಯರಾದ ಸುಂದರ ಕೂಡರಲಚ್ಚಿಲ್,ಆರೋಗ್ಯ ಸೇವಾ ಬಂಧು ಸಂಚಾಲಕರಾದ ಮಲ್ಲಿಕ್ ಕೊಳಕೆ,ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಸಂಸ್ಥೆಯ ಅಧ್ಯಕ್ಷರಾದ ಮೋಹನದಾಸ ಕೊಟ್ಟಾರಿ ಮುನ್ನೂರು, ಸದಸ್ಯರಾದ ವಿಜಯಕುಮಾರ್ ಅಡ್ಯಾರು,ಸುಕೇಶ್ ಶೆಟ್ಟಿ ತುಂಬೆ,ಇಬ್ರಾಹಿಂ ಕೈಲಾರು,ಶಿವಪ್ರಸಾದ್ ಬಂಟ್ವಾಳ ಮುಂತಾದವರು ಉಪಸ್ಥಿತರಿದ್ದರು.
ಅರೋಗ್ಯಸೇವಾ ಬಂಧು ಸಂಚಾಲಕರಾದ ಅಶೋಕ್ ಶೆಟ್ಟಿ ಸರಪಾಡಿ ಸ್ವಾಗತಿಸಿದರು.ಬ್ರಿಜೇಶ್ ಜೈನ್ ವಂದಿಸಿದರು.ಶ್ರೀ ನಿಧಿ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 172 ಕ್ಕು ಅಧಿಕ ಶಿಬಿರದ ಸದುಪಯೋಗವನ್ನು ಪಡೆದರು, ತಪಾಸಣೆಯ ನಂತರ ಔಷಧಿಯನ್ನು ಹಾಗೂ ಕಣ್ಣು ತಪಾಸಣೆಗೈದ 50ಕ್ಕೂಅಧಿಕ ಮಂದಿಗೆ ಉಚಿತ ಕನ್ನಡಕವನ್ನು ವಿತರಿಸಲಾಯಿತು,