Published On: Tue, Jul 23rd, 2024

ತುಳುವ ಸಂಸ್ಕೃತಿ,ಆಚರಣೆ ಉಳಿಸುವ ಪ್ರಯತ್ನ ನಮ್ಮಿಂದಾಗಬೇಕು:ವಿಜಯಲಕ್ಷ್ಮೀ ಕಟೀಲು

ಬಂಟ್ವಾಳ:   ತುಳುವ ಸಂಸ್ಕೃತಿ,ಆಚರಣೆ ಉಳಿಸುವ ಪ್ರಯತ್ನ ನಮ್ಮಿಂದಲೇ ಆಗಬೇಕು, ನಮ್ಮ ಹಿರಿಯರು ತುಳುನಾಡಿನ ಪ್ರತಿಯೊಂದು ಆಚರಣೆಗೂ ಮಹತ್ವವನ್ನು ನೀಡಿ ಆಚರಿಸುತ್ತಿದ್ದರು ಮತ್ತು ಪ್ರತಿಯೊಂದು ಆಚರಣೆಗು ಅದರದೇ ಆದ ವಿಶೇಷತೆ,ಸಂಸ್ಕೃತಿ,ಸಂಪ್ರದಾಯವು ಇತ್ತು ಎಂದು ಮಂಚಿ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ, ಸಾಹಿತಿಗಳಾದ ವಿಜಯಲಕ್ಷ್ಮೀ ಕಟೀಲು ಹೇಳಿದರು.

ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಯುವವಾಹಿನಿ(ರಿ.) ಮಾಣಿ ಘಟಕ ಆಶ್ರಯದಲ್ಲಿ ನಡೆದ “ಆಟಿದ ನೆಂಪು”ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ(ರಿ.) ಮಾಣಿ ಇದರ ಅಧ್ಯಕ್ಷರಾದ ಸುರೇಶ್ ಸೂರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಕುಶಾಲಪ್ಪ ಪೂಜಾರಿ, ಘಟಕದ ಗೌರವ ಸಲಹೆಗಾರರಾದ ನಾರಾಯಣ ಸಾಲ್ಯನ್ ರವರು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅದ್ಯಕ್ಷರಾದ ನಾಗೇಶ್ ಪೂಜಾರಿ ಕೊಂಕಣಪದವು ವಹಿಸಿದ್ದರು.  ಕಾರ್ಯಕ್ರಮದ ಸಂಚಾಲಕರಾದ ಸತೀಶ್ ಮುರುವ ಹಾಗೂ ಸಹ ಸಂಚಾಲಕರಾದ ಶಶಿಪ್ರಭ ಮಿತ್ತೂರು ಉಪಸ್ಥಿತರಿದ್ದರು.

“ಅಸ್ಮಿತಾ ಖೇಲೊ ಇಂಡಿಯಾ” ರಾಷ್ಟಿಯ ಮಟ್ಟದ ವೈಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಯ ಪದಕ ಪಡೆದ ಬರಿಮಾರು ಗ್ರಾಮ ರಕ್ಷಾ.ಜಿ ರವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.


ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ಸೆಲ್ಫಿ ವಿದ್ ಚಾವಡಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೀಪಕ್ ಪೆರಾಜೆ ಮತ್ತು ದ್ವಿತೀಯ ಬಹುಮಾನ ಸಾಯಿ ಪ್ರಣಾಮ್ ಹಾಗೂ ಲಕ್ಕಿ ಮೆಂಬರ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಾಲಕೃಷ್ಣ ದೇಲಬೆಟ್ಟು, ದ್ವಿತೀಯ ಬಹುಮಾನ ಸತ್ಯಪ್ರಕಶ್ ಪಡೆದುಕೊಂಡರು. ಪದ್ಮಿನಿ,ನಿಕ್ಷೀತ,ಭವಿಷ್ಯ ಪ್ರಾರ್ಥಿಸಿದರು,ಘಟಕದ ಕಾರ್ಯದರ್ಶಿ ಶಾಲಿನಿ  ಜಗದೀಶ್ ರವರು ಸ್ವಾಗತಿಸಿದರು. ನಿರ್ದೇಶಕರಾದ ನವೀನ್ ಸೂರ್ಯ ವಂದಿಸಿದರು,ಸದಸ್ಯೆಯರಾದ ಜಯಶ್ರೀ ಹಾಗೂ ಪ್ರಜ್ಞಾ ಎಂ. ರವರು ಕಾರ್ಯಕ್ರಮ ನಿರೂಪಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter