ಕಡೇಶ್ವಾಲ್ಯ: ಪೆಂಡಾಲ್ ಅಳವಡಿಸುತ್ತಿದ್ದ ವೇಳೆ ಹೈಟೆನ್ಶನ್ ತಂತಿ ಸ್ಪಶರ್ಿಸಿ ಕಾಮರ್ಿಕ ಸಾವು, ನಾಲ್ವರಿಗೆ ಗಾಯ
ಬಂಟ್ವಾಳ:ಇಲ್ಲಿನ ಕಡೇಶ್ವಾಲ್ಯ ಗ್ರಾಮದ ಕಡಬೆಟ್ಟು ಎಂಬಲ್ಲಿ ಖಾಸಗಿ ಜಮೀನಿನಲ್ಲಿ ಪೆಂಡಾಲ್ ಅಳವಡಿಸುತ್ತಿದ್ದ ವೇಳೆ ಹೈಟೆನ್ಶನ್ ತಂತಿ ಸ್ಪಶರ್ಿಸಿ ಕಾಮರ್ಿಕರೊಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಮೃತರು ಬಿಹಾರ ಮೂಲದ ಕುಂದನ್ ಕುಮಾರ್ ಮಂಡಲ್ (18) ಎಂದು ಗುರುತಿಸಲಾಗಿದ್ದು, ಉಳಿದಂತೆ ಜಾರ್ಖಂಡ್ ಮೂಲದ ಬಬ್ಲು, ಪ್ರದೀಪ್, ಪಶ್ಚ್ಚಿಮ ಬಂಗಾಳದ ರೋಹಿತ್ ಎಂಬವರು ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇವರೆಲ್ಲರೂ ಕಲ್ಲಡ್ಕ ಶಾಮಿಯಾನ ಸಂಸ್ಥೆಯೊಂದರ ಕಾಮರ್ಿಕರಾಗಿದ್ದು, ಆಶಾಢ ಮಾಸದಲ್ಲಿ ಕೋಳಿ ಅಂಕ ನಡೆಸುವ ಉದ್ದೇಶದಿಂದ ಪೆಂಡಾಲ್ ಅಳವಡಿಸಲಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಗ್ರಾಮಂತರ ಠಾಣೆ ಇನ್ಸ್ ಪೆಕ್ಟರ್ ಶಿವಕುಮಾರ್, ಎಸೈ ಹರೀಶ್, ಗ್ರಾಮಕರಣಿಕ ಕರಿಬಸಪ್ಪ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ.