ಜಕ್ರಿಬೆಟ್ಟು: ನೂತನ ಅಣೆಕಟ್ಟೆ ಹಿನ್ನೆಲೆ ಕೃಷಿ ಜಮೀನಿಗೆ ಹಾನಿ ಆರೋಪ, ಡಿಸಿಗೆ ದೂರು
ಬಂಟ್ವಾಳ:ಇಲ್ಲಿನ ಜಕ್ರಿಬೆಟ್ಟು- ನರಿಕೊಂಬು ಸಂಪಕರ್ಿಸುವ ನೂತನ ಸೇತುವೆ ಮತ್ತು ಅಣೆಕಟ್ಟೆಯಿಂದ ನರಿಕೊಂಬು ಗ್ರಾಮದ ಪೊಯ್ತಾಜೆ ಎಂಬಲ್ಲಿ ಕೃಷಿ ಜಮೀನು ಹಾನಿಗೀಡಾಗಿದೆ ಎಂದು ಆರೋಪಿಸಿ ರೈತರೊಬ್ಬರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಇಲ್ಲಿನ ನಿವಾಸಿ ಎಲೋಸಿಯಸ್ ಪಾಯಸ್ ಎಂಬವರ ಸವರ್ೆ ನಂಬರ್-8/1ರಲ್ಲಿ ನದಿ ತೀರದ ಪಂಪ್ ಶೆಡ್ ಸಹಿತ ಕೃಷಿ ಜಮೀನು ಹಾನಿಗೀಡಾಗಿದೆ. ಕಳೆದ ಎರಡೂವರೆ ವರ್ಷಗಳಿಂದ ನಡೆಯುತ್ತಿರುವ ನೂತನ ಸೇತುವೆ ಸಹಿತ ಅಣೆಕಟ್ಟೆ ಕಂಬಗಳಿಗೆ ನೆರೆ ನೀರು ರಭಸದಿಂದ ಡಿಕ್ಕಿ ಹೊಡೆದು ಬಳಿಕ ನದಿ ತೀರದ ಕೃಷಿ ಜಮೀನಿಗೆ ಹೊಡೆಯುತ್ತಿದೆ. ಇದರಿಂದಾಗಿ ಮಣ್ಣು ಸವೆದು ಶೆಡ್ ಸಹಿತ ಕೃಷಿ ಜಮೀನು ನದಿ ಪಾಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈಗಾಗಲೇ ಅಡಿಕೆ, ತೆಂಗು, ಬಾಳೆ, ಕರಿಮೆಣಸು ಕೃಷಿಗೆ ಹಾನಿಯಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.