ವರ್ತಕರ ವಿ.ಸ.ಸಂಘದ ವಿಂಶತಿ ಸಂಭ್ರಮ-ಕ್ರೀಡಾಕೂಟಗಳ ಸಮಾಗಮ – ಮಾವಿನಕಟ್ಟೆ ಶಾಖೆ ಚಾಂಪಿಯನ್
ಬಂಟ್ವಾಳ: ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ 20 ನೇ ವರ್ಷದ ಆಚರಣೆಯ ಹಿನ್ನಲೆಯಲ್ಲಿ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಆಯೋಜಿಸಲಾದ ‘ವಿಂಶತಿ ಸಂಭ್ರಮ- ಸದಸ್ಯರ ಕ್ರೀಡಾಕೂಟಗಳ ಸಮಾಗಮ’ ಕಾರ್ಯಕ್ರಮವನ್ನು ನಡೆಸಲಾಯಿತು.
ಸಂಘದ ಅಧ್ಯಕ್ಷರಾದ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಸಂಸ್ಥೆಯು ಕ್ರಮಿಸಿದ 20 ವರ್ಷಗಳ ಸಾಧ್ಯತೆ, ಭಾಧ್ಯತೆಗಳನ್ನು ವಿವರಿಸಿದರು. ಕ್ರೀಡಾಕೂಟವನ್ನು ಸಂಸ್ಥೆಯ ಉಪಾಧ್ಯಕ್ಷರಾದ ಮಂಜುನಾಥ ರೈ ಅಗರಿ ಇವರು ಉದ್ಘಾಟಿಸಿದರು. ಸಂಸ್ಥೆಯ ಸ್ಥಾಪಕ ಸದಸ್ಯರುಗಳಾದ ಉದ್ಯಮಿ ಗಣೇಶ್ ಶೆಣೈ, ಸಾಮಾಜಿಕ ಸಂಘಟಕ ಬಾಬು ಭಂಡಾರಿ, ರಾಜಕೀಯ ಧುರೀಣ ವೆಂಕಪ್ಪ ಪೂಜಾರಿಯವರು ಉದ್ಘಾಟಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಈ ಸಹಕಾರಿ ಸಂಸ್ಥೆಯ 13 ಶಾಖೆಗಳಿಂದ ಪ್ರತಿ ವಿಭಾಗದಲ್ಲಿ 16 ಕ್ಕಿಂತಲೂ ಹೆಚ್ಚು ಶಾಖಾ ತಂಡಗಳು ಭಾಗವಹಿಸಿತು.ಈ ಪಂದ್ಯಾಟದಲ್ಲಿ ಮಾವಿನಕಟ್ಟೆ ಶಾಖೆ ಅತೀ ಹೆಚ್ಚು ಬಹುಮಾನವನ್ನು ಪಡೆಯುವುದರ ಮೂಲಕ ಚಾಂಪಿಯನ್ ಆಫ್. ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಭೂ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಸುದರ್ಶನ್ ಜೈನ್ ವಿಜೇತರಿಗೆ ಬಹುಮಾನ ವಿತರಿಸಿದರು. ಸಂಸ್ಥೆಯ ಕ್ರೀಡಾ ಸಂಚಾಲಕರಾಗಿ ನಿರ್ದೇಶಕರಾದ ಮೈಕೆಲ್ ಡಿಕೋಸ್ತ, ನಾರಾಯಣ ಸಿ. ಪೆರ್ನೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಅಜಿತ್ ಕುಮಾರ್, ನಿರ್ದೇಶಕರುಗಳಾದ ಸ್ವಪ್ನಾ ರಾಜಜರತ್ನ, ರಾಜೇಶ್ ಬಿ., ಜೆ. ಗಜೇಂದ್ರ ಪ್ರಭು, ವಿಜಯ ಕುಮಾರಿ ಇಂದ್ರ, ಹೇಮಂತ್ ಕುಮಾರ್ ಜೈನ್, ರವೀಂದ್ರ, ಡಾ। ಸುದೀಪ್ ಕುಮಾರ್, ಬಟ್ಯಪ್ಪ ಶೆಟ್ಟಿ, ಜಯರಾಜ್ ಹಾಜರಿದ್ದರು. ನಿರ್ದೇಶಕರಾದ ಡಾ. ಸುದೀಪ್ ರವರು ಸ್ವಾಗತಿಸಿದರು. ನಿರ್ದೇಶಕರಾದ ಸುಧಾಕರ್ ಸಾಲ್ಯಾನ್ ಹಾಗೂ ದಿವಾಕರ್ ದಾಸ್ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕರಾದ ಲೋಕೇಶ್ ಸುವರ್ಣ ವಂದಿಸಿದರು.