ಬಂಟ್ವಾಳ : 9 ವರ್ಷಗಳ ಹಿಂದೆ ಕೃಷಿಕರು ನದಿ ನೀರನ್ನು ಬಳಸಬಾರದು ಎಂದು ಮೆಸ್ಕಾಂ ಇಲಾಖೆ ತಾಕೀತು ಮಾಡಿದ ಹಾಗೂ ಇಲಾಖೆಯ ಅನಿಯಮಿತ ಲೋಡ್ ಶೆಡ್ಡಿಂಗ್ ಬಗ್ಗೆ ಕೃಷಿ ಕಾಮರ್ಿಕರು ನದಿ ನೀರು ಬಳಕೆದಾರರ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದ ಸಂದರ್ಭ ಪೊಲೀಸರೊಂದಿಗೆ ಉಂಟಾದ ಘರ್ಷಣೆಯಲ್ಲಿ ರೈತರ ಮೇಲೆ ಹೇರಲಾದ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಬಂಟ್ವಾಳ ನ್ಯಾಯಾಲಯ ಆರೋಪಿತರೆಂದು ಹೆಸರಿಸಲಾಗಿದ್ದ ಎಲ್ಲ 21 ಮಂದಿ ರೈತರನ್ನು ಖುಲಾಸೆಗೊಳಿಸಿ ಬುಧವಾರ ಆದೇಶ ನೀಡಿದೆ.
ನ್ಯಾಯಾಲಯದ ತೀಪರ್ಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಸರಪಾಡಿ ಸುಬ್ಬಣ್ಣ ಶೆಟ್ಟಿ ರೈತರ ಮೇಲೆ ಪೊಲೀಸರು ವಿನಾ ಕಾರಣ ದಬ್ಬಾಳಿಕೆ ನಡೆಸಿ ದಾಖಲಿಸಿಕೊಂಡ ಪ್ರಕರಣ ಕೊನೆಗೂ 9 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮಣ್ಣುಪಾಲಾಗುವ ಮೂಲಕ ರೈತರ ನಿರಂತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ನ್ಯಾಯಕ್ಕೆ ಎಂದೂ ಸಾವಿಲ್ಲ ಎಂಬುಕ್ಕೆ ಇಂದಿನ ನ್ಯಾಯಾಲಯದ ತೀಪರ್ೇ ಸಾಕ್ಷಿಯಾಗಿದೆ ಎಂದರು. ರೈತರ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಪರಸ್ಪರ ಸಿಹಿ ಹಂಚಿ ಜಯಘೋಷ ಮೊಳಗಿಸಿದರು.

ಕೃಷಿಕರು ನದಿ ನೀರನ್ನು ಕೃಷಿ ಸಂಬಂಧಿ ಕಾರ್ಯಗಳಿಗೆ ಬಳಸುವುದನ್ನು ಮೆಸ್ಕಾಂ ಇಲಾಖೆ ನಿರ್ಬಂಧಿಸಿರುವುದನ್ನು ವಿರೋಧಿಸಿ 2005 ರಲ್ಲಿ ನೇತ್ರಾವದಿ ನದಿ ನೀರು ಬಳಕೆದಾರ ವೇದಿಕೆಯ ನೇತೃತ್ವದಲ್ಲಿ ಮೆಸ್ಕಾಂ ಇಲಾಖೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭ ಮೆಸ್ಕಾಂ ಕಛೇರಿಯ ಮುಂಭಾಗ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ ಭಾರೀ ಸಂಖ್ಯೆಯ ಪೊಲೀಸರಿಗೂ ರೈತರಿಗೂ ಮಧ್ಯೆ ಚಕಮಕಿ ನಡೆದಿತ್ತು. ಈ ಸಂದರ್ಭ ಅಂದಿನ ವೃತ್ತ ನಿರೀಕ್ಷಕ ಸಂಜೀವ ನ್ಯಾಕ್ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಕೃಷಿಕರ ಮೇಲೆ ಲಾಟಿ ಜಾಜರ್್ ನಡೆಸಲು ಆದೇಶಿಸಿದ್ದರು. ಪೊಲೀಸರ ಲಾಠಿಯೇಟಿನಿಂದಾಗಿ ಹಲವು ಕೃಷಿಕರು ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿ ಸ್ಥಳದಲ್ಲಿದ್ದ ಹೋರಾಟ ಸಮಿತಿಯ ಅಧ್ಯಕ್ಷ ಸರಪಾಡಿ ಸುಬ್ಬಣ್ಣ ಶೆಟ್ಟಿ, ಜಯರಾಂಕೃಷ್ಣ ಪೊಳಲಿ, ವೆಂಕಟೇಶ್ವರ ಭಟ್, ಸರಪಾಡಿ ಅಶೋಕ್ ಶೆಟ್ಟಿ, ಬಾಬು ಮಾಸ್ಟರ್, ಅನಂತ ಕೃಷ್ಣ ಭಟ್, ಪುರುಷೋತ್ತಮ ಪೂಜಾರಿ, ಮಾರ್ಷಲ್ ಗೊನ್ಸಾಲ್ವೆಸ್, ಕರುಣಾಕರ ಆಳ್ವ, ಶಶಿದರ ಪೂಜಾರಿ, ವಿಶ್ವನಾಥ ಶೆಟ್ಟಿ, ವೆಂಕಟೇಶ್ವರ ಭಟ್, ಗೋಪಾಲಕೃಷ್ಣ ಪ್ರಭು, ಶೀನ ಬಲ್ಲಾಳ್, ವಸಂತ ಪ್ರಭು, ಬಿ.ಟಿ. ನಾರಾಯಣ ಭಟ್, ದಾಮೋದರ ಗೌಡ, ರಾಮಣ್ಣ ಬಂಗೇರ, ಆಶೋಕ್ ಕುಮಾರ್ ಬರಿಮಾರು, ರಾಜೇಶ್ ರೈ, ಶಶೀಂದ್ರ ಆಚಾರ್ಯ ಎಂಬ 21 ಮಂದಿ ಕೃಷಿಕರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಬಳಿಕ ಪೊಲೀಸ್ ಕಡತದಲ್ಲಿ ಆರೋಪಿತರೆಂದು ಹೆಸರಿಸಲಾದ ರೈತರು ಜಿಲ್ಲಾ ಸೆಶನ್ಸ್ ಕೋಟರ್್ನಿಂದ 2013 ರ ಎ 20 ರಂದು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ನಂತರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದಂತೆ ಇತ್ತ ಪ್ರಕರಣದ ರಾಜಿ ಪಂಚಾಯಿತಿಕೆಗಾಗಿ ಹಲವು ಪ್ರಯತ್ನಗಳನ್ನೂ ನಡೆಸಲಾಗಿತ್ತಾದರೂ ಅದ್ಯಾವುದೂ ಫಲ ನೀಡಿರಲಿಲ್ಲ. ಈ ಮಧ್ಯೆ ನಂತರ ನಡೆದ ಬೆಳವಣಿಗೆಯಲ್ಲಿ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಸುದರ್ಶನ್ ಆರೋಪಿಗಳ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಕೂಡಾ ಸಲ್ಲಿಸಿದ್ದರು. ಬಿ ಎಸ್ ಯಡಿಯೂರಪ್ಪ ಸೀಎಂ ಆಗಿದ್ದ ಸಂದರ್ಭದಲ್ಲಿ ರಾಜ್ಯಾದ್ಯಂತ ರೈತರ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ನಿಧರ್ಾರ ಪ್ರಕಟಿಸಿದ್ದಾರಾದರೂ ಬಂಟ್ವಾಳದ ರೈತರ ಪ್ರಕರಣ ಕೈಬಿಡಲಾಗಿರಲಿಲ್ಲ. ಬಳಿಕ ಡೀವಿ ಸದಾನಂದ ಗೌಡ ಸೀಎಂ ಆಗಿದ್ದಾಗಲೂ ಪ್ರಕರಣ ಮುಗಿಸಲು ಇನ್ನಿಲ್ಲದ ಪ್ರಯತ್ನ ನಡೆಸಲಾಗಿತ್ತಾದರೂ ಆಗಲೂ ಕೃಷಿಕರು ಮಾನವ ಹಕ್ಕು ಆಯೋಗಕ್ಕೆ ದೂರಿರುವುದರಿಂದ ಪ್ರಕರಣ ಏಕಾಏಕಿ ಹಿಂದೆಗೆಯಲು ಸಾಧ್ಯವಿಲ್ಲ ಎಂಬ ಸಬೂಬು ವ್ಯಕ್ತವಾಗಿತ್ತು ಎನ್ನಲಾಗಿದೆ.
ಆದರೆ ಇದೀಗ ಸುದೀರ್ಘ ವಿಚಾರಣೆಯ ಬಳಿಕ ನ್ಯಾಯಾಲಯ ರೈತರ ವಿರುದ್ದದ ಪ್ರಕರಣಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಎಲ್ಲ 21 ಮಂದಿ ರೈತರನ್ನು ಆರೋಪದಿಂದ ಮುಕ್ತಗೊಳಿಸಿ ಆದೇಶ ನೀಡಿದೆ. ರೈತರ ಪರವಾಗಿ ನ್ಯಾಯವಾದಿ ಜಯರಾಂ ರೈ ವಾದಿಸಿದ್ದರು.
