ರಾಯಿ: ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈತ್ರೋಡಿ ಕ್ವಾರ್ಟಸರ್್ ಎಂಬಲ್ಲಿ ಕಳೆದ ಒಂದು ತಿಂಗಳಿನಿಂದ ಪೈಪ್ಲೈನ್ ಒಡೆದು ಹೋಗಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗದೆ ಪೋಲಾಗುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪಂಚಾಯಿತಿ ಅಧಿಕಾರಿಗಳು ಮಾತ್ರ ಮೌನವಾಗಿರುವ ಬಗ್ಗೆ ಸ್ಥಳೀಯರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

3btl-kaithrody

3btl-kaithrody-1
ಕಳೆದ ಆರು ತಿಂಗಳ ಹಿಂದೆಯಷ್ಟೇ ಇಲ್ಲಿನ ಪಂಪ್ಹೌಸ್ಗೆ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಎಂಬವರು ಬೀಗ ಜಡಿದ ಪರಿಣಾಮ ಇಲ್ಲಿನ ಅಂಗನವಾಡಿ ಸಹಿತ ನೂರಾರು ಮನೆಗಳಿಗೆ ನೀರಿನ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ರೊಚ್ಚಿಗೆದ್ದ ಸ್ಥಳೀಯರು ರಾಯಿ ಗ್ರಾಮ ಪಂಚಾಯಿತಿಗೆ ದಿಢೀರ್ ಮುತ್ತಿಗೆ ಹಾಕಿ ಅವರ ಪಿಡಿಒ ವಿರುದ್ಧ ಧಿಕ್ಕಾರ ಕೂಗಿದ್ದರು.
ಇದೇ ವೇಳೆ ಸ್ಥಳೀಯ ಬಾಜರ್ಾರ್ ಕೊಳವೆ ಬಾವಿಯಿಂದ ಕೈತ್ರೋಡಿಗೆ ಪೈಪ್ಲೈನ್ ಮೂಲಕ ಕುಡಿಯುವ ನೀರು ಪೂರೈಸುವುದಾಗಿ ಪಿಡಿಒ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿತ್ತು.

ಆಮೆಗತಿಯಲ್ಲಿ ನಡೆದ ಪೈಪ್ಲೈನ್ ಕಾಮಗಾರಿ ಕಳೆದ ಒಂದು ವಾರದ ಹಿಂದೆಯಷ್ಟೇ ಪೂರ್ಣಗೊಂಡಿದ್ದು, ಕುಡಿಯುವ ನೀರಿನ ಸಂಪರ್ಕ ಮಾತ್ರ ಇನ್ನೂ ನೀಡಿಲ್ಲ. ಈ ಬಗ್ಗೆ ಗ್ರಾ.ಪಂ.ಅಧ್ಯಕ್ಷರಿಗೆ ದೂರಿಕೊಂಡರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಕುಡಿಯುವ ನೀರು ಪೂರೈಕೆಗೆ ಪ್ರತ್ಯೇಕ ಸಮಿತಿ ಇದೆ ಎನ್ನುತ್ತಿರುವ ಇಲ್ಲಿನ ಸದಸ್ಯರು ಮತ್ತು ಪಿಡಿಒ ಪ್ರತೀ ತಿಂಗಳಿಗೆ ರೂ 75ರಂತೆ ಬಿಲ್ಲು ಪಾವತಿಸುವಂತೆ ತಪ್ಪದೆ ನೋಟೀಸು ರವಾನಿಸುತ್ತಾರೆ. ಕೆಲವೊಮ್ಮೆ ಬಿಲ್ಲು ಪಾವತಿಸಿದ್ದರೂ ಎರಡೆರಡು ಬಾರಿ ಬಿಲ್ಲು ಕಳುಹಿಸುವ ಮೂಲಕ ನಾಗರಿಕರನ್ನು ವಂಚಿಸುತ್ತಿದ್ದಾರೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಈ ಬಾರಿ ದೀಪಾವಳಿ ಹಬ್ಬ ಸಂದರ್ಭದಲ್ಲಿಯೂ ನೀರು ಪೂರೈಕೆಯಾಗಿಲ್ಲ. ಕಳೆದ ಒಂದು ತಿಂಗಳ ಹಿಂದೆ ಪೈಪ್ಲೈನ್ ಒಡೆದು ಹೋಗಿದ್ದು, ಒಂದು ಬಾರಿ ಸ್ಥಳೀಯರೇ ಸ್ವತಃ ದುರಸ್ತಿಗೊಳಿಸಿದ್ದೇವೆ. ಇದೀಗ ಒಡೆದಿರುವ ಪೈಪ್ಲೈನ್ ಬಳಿ ಕೃತಕ ಕೆರೆ ನಿಮರ್ಾಣಗೊಂಡಿದ್ದು, ಕುಡಿಯುವ ನೀರಿನ ಟ್ಯಾಂಕಿನ ಕೆಳಭಾಗದಲ್ಲಿ ಇರುವ ಗೇಟ್ವಾಲ್ ಬಳಿಯೂ ನೀರು ಪೋಲಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಇದೇ ನೀರನ್ನು ಸಣ್ಣಪುಟ್ಟ ಪಾತ್ರೆ ಮೂಲಕ ಕೊಡಕ್ಕೆ ತುಂಬಿಸಿ ಉಪಯೋಗಿಸುತ್ತಿದ್ದೇವೆ.

ಈ ದುಸ್ಥಿತಿ ಬಗ್ಗೆ ಪಂಚಾಯಿತಿಗೆ ದೂರಿಕೊಂಡರೆ, ಅಲ್ಲಿಗೆ ಭೇಟಿ ನೀಡುವ ಬದಲಾಗಿ ಕಚೇರಿಯಲ್ಲೇ ಕುಳಿತು ಅದರ ಛಾಯಾಚಿತ್ರ ತೆಗೆದು ತಂದು ಕೊಡುವಂತೆ ನಾಗರಿಕರಿಗೆ ಪಿಡಿಒ ಸೂಚಿಸಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ.

ಈ ಬಗ್ಗೆ ತಕ್ಷಣವೇ ಬಂಟ್ವಾಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ನಾಗರಿಕರಿಗೆ ಕುಡಿಯುವ ನೀರು ಪೂರೈಕೆಗೆ ಸೂಚಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

By suddi9

Leave a Reply

Your email address will not be published. Required fields are marked *