ವಿದ್ಯುತ್ ತಂತಿ ತಗಲಿ ಕಾಲೇಜು ವಿದ್ಯಾರ್ಥಿನಿ ಸಾವು
ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ಜು.೧೯ ರಂದು ಶುಕ್ರವಾರಇಂದು ಮುಂಜಾನೆ ಕಡಿದು ಬಿದ್ದಿದ್ದ ವಿದ್ಯುತ್ ತಂತಿಗೆ ತಗುಲಿದ ಕಾಲೇಜಿ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಹಸು ನೀಗಿದ್ದಾಳೆ.
ಮೃತ ವಿದ್ಯಾರ್ಥಿನಿ ಆಶ್ನಿ ಶೆಟ್ಟಿ(೨೧) ಮಂಗಳೂರಿನ ಕಾಲೇಜಲ್ಲಿ ಚಾರ್ಟೆಡ್ ಅಕೌಂಟೆಂ ಟ್ ಕಲಿಯುತ್ತಿದ್ದಳು. ಈಕೆ ಗುರುಪುರ ಕಲ್ಲಕಲಂಬಿ ನಿವಾಸಿ ಹರೀಶ್ ಶೆಟ್ಟಿ ಎಂಬವರ ಪುತ್ರಿಯಾಗಿದ್ದಾಳೆ.
ಹರೀಶ್ ಶೆಟ್ಟಿ ಅವರು ತಮ್ಮ ಮನೆಯ ದನಗಳನ್ನು ಗದ್ದೆಯಲ್ಲಿ ಮೇಯಲು ಕಟ್ಟಲು ಹೋಗಿದ್ದು, ಅವರ ಹಿಂದೆ ಮನೆಯ ಎರಡು ನಾಯಿಗಳು ಹೋಗಿದ್ದವು. ತಮ್ಮ ಮನೆಯ ನಾಯಿಗಳನ್ನು ತರಲೆಂದು ಆಶ್ನಿ ಪ್ರಯತ್ನಿಸಿದಾಗ ಅದಾಗಲೇ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿದ್ದು, ತೀವ್ರ ಅಸ್ವಸ್ಥ ಗೊಂಡ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ.
ವಿದ್ಯುತ್ ತಂತಿ ಬಿದ್ದಿದ್ದ ಸ್ಥಳದಲ್ಲಿ ಮೂರು ನಾಯಿಗಳು ಹಾಗೂ ಒಂದು ಕೇರೆ ಹಾವು ಸತ್ತು ಬಿದ್ದಿದೆ.
ಮೆಸ್ಕಾಂನವರು ವಿದ್ಯುತ್ ಕಡಿತಗೊಳಿಸಿದ ಬಳಿಕ ಸ್ಥಳೀಯರು ಮತ್ತು ಮನೆಯವರು ಆಶ್ನಿಯನ್ನು ರಕ್ಷಿಸಲು ತೀವ್ರ ತೆರನಾದ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಘಟನಾ ಸ್ಥಳದಲ್ಲಿ ನೀರಿನಲ್ಲಿ ತೇಲಾಡುತ್ತಿರುವ ಪಾದರಕ್ಷೆಗಳು ಮತ್ತು ಛತ್ರಿಗಳೇ(ಕೊಡೆಗಳು) ಸಾಕ್ಷಿö್ಯಯಾಗಿವೆ. ಇಷ್ಟಿದ್ದರೂ ವಿದ್ಯುತ್ ತಂತಿ ತುಂಡಾಗಿ ಬಿದ್ದರೆ, ವಿದ್ಯುತ್ ಟ್ರಪ್ ಆಗುತ್ತದೆ ಎಂದು ಹೇಳಲಾಗುತ್ತಿದ್ದರೂ, ಇಲ್ಲಿ ಕಳೆದ ರಾತ್ರಿ ತುಂಡಾಗಿ ಬಿದ್ದಿರುವ ವಿದ್ಯುತ್ ಟ್ರಿಪ್ ಆಗಿಲ್ಲ ಯಾಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಮನೆಯವರಿಗೆ ವಿಷಯ ತಿಳಿಯುತ್ತಲೇ ತಾಯಿ ಆಶಾ ಅವರು ಓಡೋಡಿ ಬಂದಿದ್ದು, ಮಗಳನ್ನು ಎತ್ತಲು ಪ್ರಯತ್ನಿಸಿದಾಗ ಅವರಿಗೂ ವಿದ್ಯುತ್ ಆಘಾತವಾಗಿದೆ. ಅಲ್ಲಿದ್ದವರು ತಕ್ಷಣ ಅವರನ್ನು ಹಿಂದಕ್ಕೆ ಕರೆದಿದ್ದು, ಪರಿಸ್ಥಿತಿ ಗಂಭೀರತೆ ಅರಿತ ಸ್ಥಳೀಯರು ಮೆಸ್ಕಾಂಗೆ ಕರೆ ಮಾಡಿದರು. ವಿದ್ಯುತ್ ಸಂಪರ್ಕ ಕಡಿತಗೊಂಡ ಬಳಿಕ ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ತುರ್ತು ಚಿಕಿತ್ಸೆ ಸ್ಪಂದಿಸದ ಆಶ್ನಿ ಕೊನೆಯುಸಿರೆಳೆದಿದ್ದಾಳೆ.
ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಈಕೆ ಚಾರ್ಟಡ್ ಅಕೌಂಟೆAಟ್ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಳು. ಕಲ್ಲಕಲಂಬಿಯ ಹರೀಶ್-ಆಶಾ ದಂಪತಿಗೆ ಮಕ್ಕಳಿಬ್ಬರಿದ್ದು, ಪುತ್ರ ನಗರದಲ್ಲಿ ಉದ್ಯೋಗದಲ್ಲಿದ್ದಾನೆ. ಪುತ್ರಿಯ ಆಕಸ್ಮಿಕ ಸಾವಿಂದ ತಂದೆ-ತಾಯಿ ತೀವ್ರ ಆಘಾತಗೊಂಡಿದ್ದಾರೆ. ಶುಕ್ರವಾರ ಸಂಜೆ ಮನೆಯ ಹತ್ತಿರದ ಗದ್ದೆ ಪ್ರದೇಶದಲ್ಲಿ ಅಂತ್ಯಸAಸ್ಕಾರ ನಡೆದಿದ್ದು, ಭಾರೀ ಸಂಖ್ಯೆ ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ. ನಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.