ಧಾರಾಕಾರ ಗಾಳಿ-ಮಳೆಗೆ ಮನೆಗೆ ಹಾನಿ
ಕೈಕಂಬ: ಕಳೆದ ನಾಲ್ಕೆÊದು ದಿನಗಳಿಂದ ನಿರಂತರ ಸುರಿಯುತ್ತಿರುವ ಧಾರಾಕಾರ ಗಾಳಿ-ಮಳೆಗೆ ಕರಿಯಂಗಳ ಗ್ರಾಮದ ಪೊಳಲಿ ಜನಾರ್ಧನ ದೇವಾಡಿಗ ರವರ ಮನೆಯ ಸೀಟು ಗಾಳಿಗೆ ಹಾರಿ ಹೋಗಿದ್ದು ಮನೆಯ ಸಾಮಾಗ್ರಿಗಳು ಹಾನಿಗೊಂಡಿರುತ್ತದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಜನ ಪದವು ಶೌರ್ಯ ಘಟಕದ ಸದಸ್ಯರಿಂದ ಕೂಡಲೇ ಸ್ಪಂದಿಸಿ ಹಾನಿಗೊಳಗಾದ ಮನೆಯ ಮೇಲ್ಚಾವಣಿಯ ಸೀಟು ಹಾಕಿ ಸರಿ ಮಾಡಿಕೊಟ್ಟರು.
ಬೆಂಜನ ಪದವು ಶೌರ್ಯ ಘಟಕದ ಸಂಯೋಜಕಿ ರತ್ನ, ಘಟಕ ಪ್ರತಿನಿಧಿ ಅಶೋಕ್ ಸದಸ್ಯರಾದ ಪ್ರಮೀಳಾ, ಶೋಭ, ಶಂಭಾ, ಸತೀಶ, ವಿಶ್ವನಾಥ ಇದ್ದರು.