ಸುಳ್ಯ: ಸುಳ್ಯ ಮೂಲದ ಮಹಿಳೆಯೊ ಬ್ಬರು ಲಂಡನ್‍ನಲ್ಲಿ ಅಪಮೃತ್ಯುಗೀಡಾಗಿದ್ದು, ಇದು ಆತ್ಮಹತ್ಯೆಯೋ, ಅಥವಾ ಕೊಲೆ ಯೋ ಎಂಬ ಸಂಶಯ ವ್ಯಕ್ತವಾಗಿದೆ. ಸುಳ್ಯದಲ್ಲಿ ವ್ಯಾಪಾರಿಯಾಗಿರುವ ಕೇರ್ಪಳದ ಧನಂಜಯ ಕಾಸಿನಗೋಡ್ಲು ಹಾಗೂ ಮುಖ್ಯ ಶಿಕ್ಷಕಿ ಶಕುಂತಳಾ ಟೀಚರ್ ದಂಪತಿ ಪುತ್ರಿ ಪ್ರಿಯಾ(24) ಮೃತಪಟ್ಟ ಮಹಿಳೆ.
3 ವರ್ಷಗಳ ಹಿಂದೆ ಬೆಂಗ ಳೂರಿನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದ ವೇಳೆ ಕೇರಳದ ರಿತೇಶ್ ಎಂಬ ವರನ್ನು ಪ್ರೀತಿಸಿದ್ದರು. ಬಳಿಕ ಯುವಕನ ಮನೆಯವರ ವಿರೋಧದ ಮಧ್ಯೆ ಅವರ ವಿವಾಹವು 2012 ಜನವರಿ 22ರಂದು ನಡೆದಿತ್ತು. ಲಂಡನ್‍ನಲ್ಲಿ ಶಿಪ್‍ಯಾರ್ಡ್ ನಲ್ಲಿ ಆತನಿಗೆ ಉದ್ಯೋಗ ಲಭಿಸಿದ ಕಾರಣ ಪ್ರಿಯಾ ತನ್ನ ಪತಿ ರಿತೇಶ್‍ನೊಂದಿಗೆ ಲಂಡನ್‍ಗೆ ತೆರಳಿ ಅಲ್ಲಿ ನೆಲೆಸಿದ್ದರು. ಮಂಗಳವಾರ ಅಲ್ಲಿ ಅವರು ಮೃತಪಟ್ಟಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದ್ದು, ತಾಯಿ ಶಕುಂತಳಾ ಟೀಚರ್ ಆಘಾತ ಗೊಂಡು ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯವರು ಲಂಡನ್‍ಗೆ ತೆರಳುವ ಸಿದ್ಧತೆಯಲ್ಲಿದ್ದಾರೆ.

