ಕುಸಿದ ಮನೆ ಸ್ಥಳಕ್ಕೆ ಶಾಸಕರ ಭೇಟಿ
ಬಂಟ್ವಾಳ:ತಾಲೂಕಿನ ಸುರಿದ ಮಳೆಗೆ ಸಜೀಪಮುನ್ನೂರು ಗ್ರಾಮದ ನಂದಾವರ ಎಂಬಲ್ಲಿ ಕುಂಜ್ಞಣ್ಣ ದೇವಾಡಿಗರವರ ಮನೆ ಕುಸಿದಿದ್ದು, ಘಟನಾ ಸ್ಥಳಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳದಿಂದಲೇ ಕಂದಾಯ ಇಲಾಖಾಧಿಕಾರಿಗಳಿಗೆ ಕರೆ ಮಾಡಿದ ಶಾಸಕರು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಸ್ಥಳೀಯ ಪ್ರಮುಖರು ಶಾಸಕರ ಭೇಟಿಯ ವೇಳೆ ಉಪಸ್ಥಿತರಿದ್ದರು.
