ಎಂ.ಆರ್. ಪಿ.ಎಲ್ ನಿಂದ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ತರಗತಿ ಕೊಠಡಿಗಳ ಉದ್ಘಾಟನೆ
ಬಂಟ್ವಾಳ: ಫರಂಗಿಪೇಟೆ, ಅರ್ಕುಳ ಅನುದಾನಿತ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂ.ಆರ್. ಪಿ.ಎಲ್ ನ ಸಿ.ಎಸ್. ಆರ್ .ಅನುದಾನದಿಂದ 25 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡ 2 ತರಗತಿ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ನಡೆಯಿತು.

ಎಂ ಆರ್ ಪಿ ಎಲ್ ನ ಸಿ ಎಸ್ ಆರ್ ಫಂಡ್ ನ ಸೀನಿಯರ್ ಎಂಜಿನೀಯರ್ ನಾಗರಾಜ್ ರಾವ್ ರವರು ತರಗತಿ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ, ಎಂ ಆರ್ ಪಿ ಎಲ್ ನ ಸಿ ಎಸ್ ಆರ್ ಫಂಡ್ ನಿಂದ ಕರ್ನಾಟಕ ರಾಜ್ಯದ ರಾಯಚೂರು ನಿಂದ ಕಾಸರಗೋಡುವರೆಗೆ ವಿವಿಧ ಸಮಾಜಮುಖಿ ಕಾರ್ಯಗಳಿಗೆ ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ ಎಂದರು.

ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಶಾಲಾ ವಾಚನಾಲಯ ವನ್ನು ಉದ್ಘಾಟಿಸಿ ಮಾತನಾಡಿ,ಶಾಲೆಯ ಅಭಿವೃದ್ಧಿಗಾಗಿ ಶಾಸಕನ ನೆಲೆಯಲ್ಲಿ ಶ್ರಮಿಸುತ್ತೆನೆ,ವಿದ್ಯಾರ್ಥಿಗಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ಸಿಗುವಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮುಖ್ಯವಾಗಿದೆ ಎಂದರು.ಕಂಪ್ಯೂಟರ್ ಲ್ಯಾಬ್ ನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ರವರುಅನುದಾನಿತ ಶಾಲೆಗಳು ಅನುದಾನವಿಲ್ಲದೆ ಸೊರಗುತ್ತಿರುವ ಈ ಕಾಲಘಟ್ಟದಲ್ಲಿ ಶ್ರೀ ರಾಮ ಶಾಲೆಯ ಆಡಳಿತ ಮಂಡಳಿಯ ಆಸಕ್ತಿ ಮತ್ತು ಶ್ರಮದಿಂದಾಗಿ ಜಿಲ್ಲೆಯಲ್ಲಿ ಉತ್ತಮ ಶಾಲೆಯಾಗಿ ಬೆಳಗುತ್ತಿದೆ ಎಂದು ಶ್ಲಾಘಿಸಿದರು.

ಅರ್ಕುಳಬೀಡು ವಜ್ರನಾಭ ಶೆಟ್ಟಿಯವರು ಅದ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎ.ಕೆ.ಜಯರಾಮ ಶೇಕ , ಶಾಲಾ ಸಂಚಾಲಕರಾದ ಎ. ಗೋವಿಂದ ಶೆಣೈ ,ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ಜಲೀಲ್ , ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯೆ ಸುಚಿತ್ರ ಪದ್ಮನಾಭ , ಆಡಳಿತ ಮಂಡಳಿ ಸದಸ್ಯರುಗಳಾದ ಝಫ್ರುಲ್ಲಾ ಒಡೆಯರ್ , ಕೃಷ್ಣ ಕುಮಾರ್ ಪೂಂಜಾ , ದಾಮೋದರ ಶೆಣೈ , ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೈಲಾ ಯು , ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಜಯಕುಮಾರ್ ಉಪಸ್ಥಿತರಿದ್ದರು.
ಶಾಲೆಯ ಮುಖ್ಯಸ್ಥರಾದ ಕೆ.ಆರ್ ದೇವದಾಸ್ ಸ್ವಾಗತಿಸಿ,ಪ್ರಸ್ತಾವಿಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೈಲಾ ಯು.ವಂದಿಸಿದರು. ಸಹ ಶಿಕ್ಷಕಿ ಭುವನೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು