ಕೊಂಕಣಿ ಸಾಹಿತಿ ಪಂಚು ಬಂಟ್ವಾಳ್ ನಿಧನ
ಬಂಟ್ವಾಳ: ಬರಹಗಾರ,ಕವಿ,ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ,ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಬಂಟ್ವಾಳ ತಾಲೂಕಿನ ಅಮ್ಟಾಡಿಗ್ರಾಮದ ನಿವಾಸಿ ಫ್ರಾನ್ಸಿಸ್ ಸಲ್ಡಾನ್ಹಾ(58) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಸ್ಥಳೀಯವಾಗಿ ಪಂಚು ಬಂಟ್ವಾಳ್ ಎಂದೇ ಚಿರಪರಿಚಿತರಾಗಿರುವ ಅವರು ಕ್ಯಾಟರಿಂಗ್ ಉದ್ಯಮಿಯಾಗಿದ್ದು,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದರಲ್ಲದೆ,ಅಮ್ಟಾಡಿ ಗ್ರಾ.ಪಂ.ನ ಮಾಜಿ ಸದಸ್ಯರು ಆಗಿದ್ದಾರೆ.
ನಾಟಕ, ಸಾಹಿತ್ಯ ಮತ್ತು ಸಂಗೀತದಲ್ಲಿ ತಮ್ಮ ಕೃತಿಗಳ ಮೂಲಕ ಕೊಂಕಣಿ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿರುವ
ಅವರು ಈ ಹಿಂದೆ ಮಾಸಿಕ ನಿಯತಕಾಲಿಕ ವೊಂದರಲ್ಲಿ ಸಂಪಾದಕರಾಗಿಯು ಸೇವೆ ಸಲ್ಲಿಸಿದ್ದರು.
ಪಂಚು ಬಂಟ್ವಾಳ್ ಅವರು 200 ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ, ಅವುಗಳಲ್ಲಿ 30 ಕ್ಕೂ ಹೆಚ್ಚು ಹಾಡುಗಳನ್ನು ವಿವಿಧ ಆಲ್ಬಂಗಳಲ್ಲಿ ಸೇರಿದೆ.ಅವರ ಹಾಡುಗಳಾದ ‘ಲರಾಮ್ ಮುಜ್ಯಾ ಮೊಗಚಿಮ್’ ಮತ್ತು ‘ಮಂಡೇಲಾ’ ಕೊಂಕಣಿ ಸಂಗೀತ ಕ್ಷೇತ್ರದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆಮೊಡಂಕಾಪು ಚಚ್ ೯ ಪಾಲನಾ ಸಮಿತಿಯ ಉಪಾಧ್ಯಕ್ಷ,ಕಾರ್ಯದರ್ಶಿ ಯಾಗಿಯು ಕಾರ್ಯನಿರ್ವಹಿಸಿದ್ದ ಅವರು ಕ್ರೈಸ್ತ ಸಂಘ ಸಂಸ್ಥೆಗಳಲ್ಲಿಯು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಪತ್ನಿ, ತಲಾ ಒರ್ವಪುತ್ರಿ,ಪುತ್ರ ಹಾಗೂ ಸಹೋದರ ಧರ್ಮಗುರುಗಳಾದ ಜೆ ಬಿ ಸಲ್ಡಾನ್ಹಾ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.ಇವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.